
ಯಲ್ಲಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ವಾಲ್ಮಿಕಿ ಪ್ರಶಸ್ತಿ ಸ್ವೀಕರಿಸಿದ ಲಕ್ಷ್ಮೀ ಸಿದ್ದಿ ತರ್ಬೆತಗ್ಗು ಅವರು ಸ್ವಗ್ರಾಮ ಕ್ಕೆ ಮರಳಿದ್ದಾರೆ. ನಂದೂಳ್ಳಿ ಗ್ರಾಮ ಪಂಚಾಯತ ವತಿಯಿಂದ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಗ್ರಾಮ ಪಂಚಾಯತ ಅಧ್ಯಕ್ಷ ನರಸಿಂಹ ಕೋಣೆಮನೆ ಅವರು ಗ್ರಾಮ ಪಂಚಾಯತ ಆವಾರದಲ್ಲಿ ಲಕ್ಷ್ಮೀ ಸಿದ್ದಿ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ಲಕ್ಷ್ಮೀ ಸಿದ್ದಿ ಅವರ ನಿಸ್ವಾರ್ಥ ಸೇವೆಯಿಂದ ನಂದೂಳ್ಳಿ ಗ್ರಾಮದ ಹೆಸರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಅವರ ಸೇವೆ ನಿರಂತವಾಗಿರಲಿ ಎಂದು ಶುಭ ಹಾರೈಸಿದರು. ನಂದೂಳ್ಳಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಂಜುನಾಥ ಆಗೇರ, ವಿ.ಪ ಸದಸ್ಯ ಶಾಂತಾರಾಮ ಸಿದ್ಧಿ ಅವರ ಆಪ್ತ ಕಾರ್ಯದರ್ಶಿ ಭಾಸ್ಕರ ಸಿದ್ಧಿ ಹಾಗೂ ಗ್ರಾಮಸ್ಥರು ಇದ್ದರು .
Leave a Comment