
ಯಲ್ಲಾಪುರ : ಭೂತಾಯಿಯನ್ನು ನಂಬಿ ವರ್ಷವಿಡೀದುಡಿಯುವರೈತ, ತನ್ನ ಪರಿಶ್ರಮಕ್ಕೆತಕ್ಕ ಪ್ರತಿಫಲ ನೀಡುವಂತೆ ಭೂಮಿಯನ್ನುಆರಾಧಿಸುವ ಈ ಹಬ್ಬ ಬಹಳ ಮಹತ್ವ ಪಡೆದಿದೆ. ತಾಲೂಕಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ, ಸಂಭ್ರಮದಿAದ ಭೂಮಿ ಪೂಜೆ ನೇರವೇರಿಸಿದರು.ತಾಲೂಕಾ ಪಂಚಾಯತ ಮಾಜಿ ಸದಸ್ಯನಟರಾಜಗೌಡತಾಲೂಕಿನಕುಂದರಗಿಗ್ರಾಮದಲ್ಲಿರುವತಮ್ಮ ಹೊಲಕ್ಕೆ ಕುಟುಂಬದವರೊಡನೆ ತೆರಳಿ ಭೂಮಿ ಹುಣ್ಣಿಮೆಯನ್ನು ಸಂಭ್ರಮದಿAದ ಆಚರಿಸಿದರು.
ಹೆಸರೇ ಹೇಳುವಂತೆ ಭೂತಾಯಿಯಆರಾಧನೆಯೇ ಭೂಮಿ ಹುಣ್ಣಿಮೆಯ ವಿಶೇಷವಾಗಿದೆ. ರೈತರ ಸಮುದಾಯದಲ್ಲಿ ಸಾಮಾನ್ಯವಾಗಿಆಚರಿಸುವ ಹಬ್ಬವಾಗಿದ್ದು, ಈದಿನ ರೈತ ಸಮುದಾಯದವರುತಮ್ಮಕುಟುಂಬದವರು, ಸಂಬAಧಿಕರು, ಸ್ನೇಹಿತರೊಡನೆ ಹೊಲ ಗದ್ದೆಗಳಿಗೆ ತೆರಳಿ ಬೆಳೆದು ನಿಂತ ಫಸಲನ್ನೇ ಭೂದೇವಿಯೆಂದು ಭಾವಿಸಿ ಅದಕ್ಕೆ ಸೀರೆ ಉಡಿಸಿ, ಉಡಿ ತುಂಬಿ, ಪೂಜೆ ಸಲ್ಲಿಸುವ ಮೂಲಕ ಭೂಮಾತೆಯನ್ನುಆರಾಧಿಸುತ್ತಾರೆ.
ಉತ್ತಮ ಫಸಲನ್ನು ನೀಡಿ ವರ್ಷವಿಡಿ ನಿನ್ನ ಕೃಪೆ ನಮ್ಮ ಮೇಲಿರಲಿ ಎಂದು ಪ್ರಾರ್ಥಿಸಿ, ಅನನ್ಯ ಭಕ್ತಿ ಭಾವದಿಂದ ಪೂಜಿಸಿ ಮನೆಯಲ್ಲಿ ಸಿದ್ದಪಡಿಸಿದ ಹೋಳಿಗೆ , ಹುಗ್ಗಿ, ಸೌತೆಕಾಯಿಕಡಬು ಹೀಗೆ ವಿವಿಧ ಸಿಹಿ, ಖಾರ ಭಕ್ಷ್ಯಗಳನ್ನು ನೈವೇದ್ಯ ಅರ್ಪಿಸಿದ ನಂತರ ಹೊಲದ ಸುತ್ತಲೂಐದು ಬಗೆಯ ಪದಾರ್ಥಗಳನ್ನು ಚರಗರೂಪದಲ್ಲಿಚೆಲ್ಲುತ್ತಾರೆ. ಹೀಗೆ ಮಾಡುವದರಿಂದ ಸಮೃದ್ಧ ಫಸಲು ಬರುವುದು ಎಂಬ ಬಲವಾದ ನಂಬಿಕೆ ಕೃಷಿಕರದ್ದಾಗಿದೆ. ತಮಗೆಅನ್ನವಿಕ್ಕುವ ಭೂತಾಯಿಗೆಕೃತಜ್ಞತೆ ಸಲ್ಲಿಸುವ ಪರಿಪಾಠವನ್ನು ಮಣ್ಣಿನ ಮಕ್ಕಳು ಹೊಂದಿರುವದು ನಮ್ಮ ಸಂಸ್ಕೃತಿಯ ಹಿರಿಮೆಯಾಗಿದೆ.
ಇಂದಿನ ದಿನಗಳಲ್ಲಿ ಇಂತಹ ಆಚರಣೆಗಳು ವಿರಳವಾಗುತ್ತಿರುವರು ವಿಷಾದಕರ ಸಂಗತಿ. ಭೂತಾಯಿಆರಾಧನೆ ಮೂಲಕ ನಮ್ಮ ಪರಂಪರೆ, ಸಂಸ್ಕೃತಿಯನ್ನು ಮಕ್ಕಳಿಗೂ ಪರಿಚಯಿಸಬೇಕು. ಮಕ್ಕಳು ರೈತರ ಮಕ್ಕಳಾಗಿ ಸ್ವಗ್ರಾಮಗಳಿಗೆ ಬಂದುಕೃಷಿಯಲ್ಲಿತೊಡಗಬೇಕೆ ಹೊರತು ರೆಸಾರ್ಟಗಳಾಗಿ ಮಾರ್ಪಡಿಸಿ ಮೋಜಿಗಾಗಿ ನಿಸರ್ಗವನ್ನು ಹಾಳುಗೆಡವಬಾರದು. ಭಾತಾಯಿಯನ್ನು ಆಶ್ರಯಿಸಿ, ಆರಾಧಿಸಿದರೆ ಅವಳು ಎಂದಿಗೂ ಕೈಬಿಡುವದಿಲ್ಲ. ಪರಂಪರಾಗತವಾಗಿ ನಮ್ಮನೆಯಲ್ಲಿ ಸೀಗೆ ಹುಣ್ಣಿಮೆಯನ್ನು ಶ್ರದ್ಧಾಭಕ್ತಿಯಿಂದ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದೇವೆ. ನಮ್ಮ ಮಕ್ಕಳಿಗೂ ಈ ಸಂಪ್ರದಾಯವನ್ನು ಪಾಲಿಸುವಂತೆ ನೋಡಿಕೊಳ್ಳುತ್ತಿದ್ದೇವೆ.
– ನಟರಾಜಗೌಡತಾಪಂ ಮಾಜಿ ಸದಸ್ಯ,ಕುಂದರಗಿ
shri devaki krishna wash point karki naka honavar contact; sachin mesta 9538529046,8310014860
Leave a Comment