ಪದೇಪದೇ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುದ್ದಿಯಾಗುವ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಉಗ್ರಗಾಮಿಯ ಪತ್ನಿಯನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಟ್ಕಳದ ಜಾಲಿ ಕ್ರಾಸ್ ನಿವಾಸಿ, ಉಗ್ರಗಾಮಿ ಸದ್ದಾಂ ಹುಸೇನ್ ಪತ್ನಿ ಸಾಯಿರಾಳನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸುಮಾರು ಹದಿನೈದು ದಿನದ ಮುನ್ನ ಶಿವಮೊಗ್ಗ ಮೂಲದ ಶರತ್ ಎಂಬ ಉದ್ಯಮಿಗೆ ಅಪರಿಚಿತರಿಂದ ಜೀವ ಬೆದರಿಕೆಯ ಕರೆ ಬಂದಿತ್ತು. ಹೆಬ್ಬೆಟ್ ಮಂಜನ ಹೆಸರಿನಲ್ಲಿ ಉದ್ಯಮಿಗೆ ಆನ್ಲೈನ್ ಕರೆ ಮಾಡಿದ್ದ ದುಷ್ಕರ್ಮಿಗಳು, ಜೀವ ಬೆದರಿಕೆಯೊಡ್ಡಿದ್ದರು.
shri devaki krishna wash point karki naka honavar contact; sachin mesta 9538529046,8310014860
ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ದುಷ್ಕರ್ಮಿಗಳು ಹೆದರಿಸಿದ್ದರು. ದುಷ್ಕರ್ಮಿಗಳ ಕರೆಗೆ ಹೆದರಿಕೊಂಡು ಉದ್ಯಮಿ ಶರತ್ ಈ ಹಿಂದೆ ಸುಮಾರು 1 ಲಕ್ಷ ರೂ.ವರೆಗೆ ಹಣ ವರ್ಗಾವಣೆ ಮಾಡಿದ್ದರು. ಆದರೆ, ಮತ್ತಷ್ಟು ಹಣಕ್ಕಾಗಿ ಟಾರ್ಚರ್ ಕೊಟ್ಟಾಗ ಉದ್ಯಮಿ ಪೊಲೀಸರ ಮೊರೆ ಹೋಗಿದ್ದರು. ದುಷ್ಕರ್ಮಿಗಳು ಹಣ ವರ್ಗಾವಣೆ ಮಾಡಲು ನೀಡಿದ್ದ ಖಾತೆಯನ್ನು ಪರಿಶೀಲಿಸಿದಾಗ ಭಟ್ಕಳದ ಲಿಂಕ್ ಬೆಳಕಿಗೆ ಬಂದಿತ್ತು.
ಹಣ ವರ್ಗಾವಣೆಗೆ ದುಷ್ಕರ್ಮಿಗಳು ಭಟ್ಕಳದ ಸಾಯಿರಾಳ ಖಾತೆಯ ವಿವರ ನೀಡಿದ್ದರು. ಜೀವ ಭಯದಿಂದ ದುಷ್ಕರ್ಮಿಗಳು ನೀಡಿದ್ದ ಸಾಯಿರಾಳ ಬ್ಯಾಂಕ್ ಖಾತೆಗೆ ಉದ್ಯಮಿಯು ಹಣ ವರ್ಗಾವಣೆ ಮಾಡಿದ್ದ. ಖಾತೆಯ ಮಾಹಿತಿ ಆಧರಿಸಿ ತನಿಖೆ ಪ್ರಾರಂಭಿಸಿದ್ದ ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು, ಖಾತೆಯ ಪಕ್ಕಾ ಮಾಹಿತಿ ಪಡೆದು ಭಟ್ಕಳದ ಸಾಯಿರಾಳನ್ನು ವಶಕ್ಕೆ ಪಡೆದಿದ್ದಾರೆ.
Leave a Comment