ಹೊನ್ನಾವರ: ಪ್ರಾಥಮಿಕ ಶಾಲೆಯ ೧ ರಿಂದ ೫ನೇ ತರಗತಿಗಳು ಸೋಮವಾರ ಆರಂಭವಾಗಿದ್ದು, ತಾಲೂಕಿನ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸಿಹಿತಿಂಡಿ ನೀಡಿ ಶಾಲೆಗೆ ಸ್ವಾಗತಿಸಿ ಪಾಠ ಆರಂಭಿಸಲಾಯಿತು.
ಹೊನ್ನಾವರ ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಂಭ್ರಮದಿಂದ ಶಾಲಾ ಆರಂಭೋತ್ಸವ ಆಚರಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯವರು ಮತ್ತು ಶಿಕ್ಷಕರು ಶಾಲೆಯನ್ನು ತಳಿರುತೋರಣದಿಂದ ಸಿಂಗರಿಸಿ, ಅಂಗಳದಲ್ಲಿ ರಂಗೋಲಿ ಹಾಕಿಸಿ, ವಿದ್ಯಾರ್ಥಿಗಳಿಗೆ ಹೂವು ಮತ್ತು ಚಾಕಲೇಟ್ ನೀಡಿ ಸಂಭ್ರಮದಿಮದ ಬರಮಾಡಿಕೊಂಡರು.

ತರಗತಿ ಆರಂಭಿಸಿದ ಶಿಕ್ಷಕರು ಸರ್ಕಾರದ ಸುತ್ತೋಲೆಯ ಪ್ರಕಾರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕರೋನಾ ಸೋಂಕಿನ ಜಾಗ್ರತೆಯ ಕುರಿತು ಮಾಹಿತಿ ನೀಡಿದರು. ನಂತರ ವಿವಿಧ ವಿಷಯಗಳ ಶಿಕ್ಷಕರು ಪಾಠ ಮಾಡಿದರು.
ಮುಖ್ಯಾಧ್ಯಾಪಕರಾದ ವೀಣಾ ಶಾನಭಾಗ, ಶಿಕ್ಷಕರಾದ ವಿಜಯಾ ಶೇಟ್, ಕಲ್ಪನಾ ಹೆಗಡೆ, ಸಾವಿತ್ರಿ ಭಟ್, ಶಶಿಕಲಾ ನಾಯ್ಕ ಮತ್ತು ಎಸ್ಡಿಎಂಸಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಪಾಲಕರು ಹಾಜರಿದ್ದರು.
೧ ರಿಂದ ೫ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಅಕ್ಟೋಬರ್ ೩೦ ರವರೆಗೆ ಅರ್ಧದಿನ ತರಗತಿ ನಡೆಯಲಿದ್ದು, ನವೆಂಬರ್ ೨ ರಿಂದ ಪೂರ್ಣದಿನ ತರಗತಿಗಳು ಮುಂದುವರಿಯಲಿವೆ
shri devaki krishna wash point karki naka honavar contact; sachin mesta 9538529046,8310014860
Leave a Comment