ಯಲ್ಲಾಪುರ: ತಾಲೂಕಿನ ಕಿರವತ್ತಿಯ ಖಾರೆವಾಡ ಮಜರೆ ಯಲ್ಲಿ ಸಿಡಿಲು ಬಡಿದು ಇತ್ತೀಚೆಗೆ ಸಾವಿಗೀಡಾದ ದಿವಂಗತ ಜಾನಾಬಾಯಿ ಕಾನು ಶೆಳ್ಕೆ ರವರ ಮನೆಗೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ರಾಂಚಿ ಪ್ರವಾಸದಿಂದ ಹಿಂದಿರುಗಿದ ಕೂಡಲೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ದನಗರ ಸಮಾಜದ ಪ್ರಮುಖರು, ವನವಾಸಿ ಕಲ್ಯಾಣ ಪ್ರಾಂತ ಹಿತ ರಕ್ಷಾ ಪ್ರಮುಖ ದೊಂಡು ಪಾಟಿಲ್, ಪಂಚಾಯತ ಸದಸ್ಯ ಜಾನು ಪಾಂಡ್ರಮಿಶೆ,ಸುನಿಲ್, ಯುವಮೋರ್ಚ ಪ್ರಧಾನ ಕಾರ್ಯದರ್ಶಿ ವಿಠ್ಠಲ ಪಾಂಡ್ರಮಿಶೆ ಇನ್ನಿತರರು ಉಪಸ್ಥಿತರಿದ್ದರು.

Leave a Comment