
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ತಾಲೂಕಿನ ಆರತಿಬೈಲ್ ಬಳಿ ರಾಸಾಯನಿಕ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಅವಘಡ ಸಂಭವಿಸಿದ ಪ್ರದೇಶಕ್ಕೆ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಆಶೀಸರ ಭೇಟಿ ನೀಡಿ ಅವಲೋಕಿಸಿದರು.
ರಾಸಾಯನಿಕ ನೀರಿನ ಕಾಲುವೆ ಮೂಲಕ ಹರಿದು ಬಂದು ಗದ್ದೆಗಳಲ್ಲಿ ಹಾಗು ಸಾಗುವಳಿ ಪ್ರದೇಶಗಳು ಬೆಂಕಿಯಿಂದ ಸುಟ್ಟು ಹಾನಿಯಾಗಿರುವುದನ್ನು ವೀಕ್ಷಿಸಿದರು. ರೈತರ ಈ ಪ್ರದೇಶದ ಮಣ್ಣನ್ನು ಪ್ರಯೋಗಕ್ಕೊಳಪಡಿಸಬೇಕು, ನೀರಿನ ಪರೀಕ್ಷೆಯಾಗಬೇಕು. ಸುಟ್ಟು ಹೋದ ಪ್ರದೇಶ ಮುಂದಿನ ಬೆಳೆಬೆಳೆಯಲು ಯೋಗ್ಯವೇ ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಂದೊಳ್ಳಿ ಗ್ರಾ.ಪಂ ಸದಸ್ಯ ಟಿ.ಆರ್.ಹೆಗಡೆ, ನರಸಿಂಹ ಸಾತೊಡ್ಡಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ಇಡಗುಂದಿ ಪಿಡಿಒ ಚೆನ್ನವೀರ ಕುಂಬಾರ ಇದ್ದರು.
Leave a Comment