
ಯಲ್ಲಾಮರ: ಕನ್ನಡ ರಾಜ್ಯೋತ್ಸವದ ಅಂಗ ವಾಗಿ ಆಯೋಜಿಸಿರುವ ”ಕನ್ನಡ ಕ್ಕಾಗಿ ನಾವು ಅಭಿಯಾನ ಅಂಗವಾಗಿ ಪಟ್ಟಣದ ವಾಯ್ಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ’ ಮಾತಾಡ್, ಮಾತಾಡ್ ಕನ್ನಡ, ಕನ್ನಡಗೀತಗಾಯನಕಾರ್ಯಕ್ರಮನಡೆಯಿತು

.ರಾಷ್ಟ್ರಕವಿ ಕುವೆಂಪುರವರ ಬಾರಿಸು ಕನ್ನಡ ಡಿಂಡಿಮವ, ಡಾ. ಕೆ.ಎಸ್ ನಿಸಾರ್ ಅಹಮದ್ ರವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ರವರ ಚಿತ್ರಗೀತೆ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳು ಅರಿಶಿಣ ಕುಂಕುಮ ಪ್ರತಿನಿಧಿಸುವ ಕನ್ನಡದ ಬಣ್ಣ ಹಳದಿ ಕೆಂಪು ಧಿರಿಸನ್ನು ಧರಿಸಿ ಸುಶ್ರಾವ್ಯ ವಾಗಿ ಏಕಕಾಲದಲ್ಲಿ ಕನ್ನಡ ಡಿಂಡಿಮ್ ಮೊಳಗಿಸಿದರು.
Leave a Comment