
ಯಲ್ಲಾಪುರ :ಕನ್ನಡ ಚಿತ್ರರಂಗದ ಖ್ಯಾತ ಪ್ರತಿಭಾವಂತ ಯುವ ನಾಯಕ ನಟ, ಕನ್ನಡಿಗರ ಕಣ್ಮಣಿ ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ ಕುಮಾರ್ ರವರ ಅಗಲಿಕೆಯ ವಿಷಯ ತಿಳಿದು ಮನಸ್ಸಿಗೆ ಅತೀವ ನೋವುಂಟಾಗಿದೆ.ಕರುನಾಡಿನ ಮನೆಮಗ ಪ್ರೀತಿಯ ಅಪ್ಪು” ವಿನೊಂದಿಗೆ ಕಳೆ ಕೆಲವು ಕ್ಷಣಗಳು ಇಂದಿಗೂ ಸಹ ನನ್ನಲ್ಲಿ ಅಚ್ಚಳಿಯದೆ ಉಳಿದಿದೆ, ತಾಯಿ ಭುವನೇಶ್ವರಿಯು ಸರಳ, ಮುಗ್ಧ ವ್ಯಕ್ತಿತ್ವದ ಓರ್ವ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ.ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಕಂಬನಿ ಮಿಡಿದಿದ್ದಾರೆ.ಕನ್ನಡ ಚಿತ್ರರಂಗದ ಪ್ರತಿಭಾವಂತ ನಾಯಕ ನಟ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದ ಕೆಲವು ತಿಂಗಳ ಹಿಂದೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ಅವರ ನಿವಾಸದಲ್ಲಿ ಭೇಟಿಯಾಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ಮೇರು ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕೆಯಿಂದಾಗಿ ಕನ್ನಡ ನಾಡಿಗೆ ಹಾಗೂ ಕಲಾಲೋಕಕ್ಕೆ ತುಂಬಲಾರದ ನಷ್ಟವುಂಟಾಗಿದೆ, ಅಭಿಮಾನಿಗಳ ಪ್ರೀತಿಯ ಅಪ್ಪು ನೇತ್ರದಾನ ಮಾಡುವ ಮೂಲಕವಾಗಿ ಸಾವಲ್ಲೂ ಸಹ ಸಾರ್ಥಕತೆಯನ್ನು ಮೆರೆದಿದ್ದಾರೆ.ಎಂದಿದ್ದಾರೆ
Leave a Comment