ಹೊನ್ನಾವರ : ಕಾಸರಕೋಡಿನ ಮೀನುಗಾರ ಮುಖಂಡ ಎಮ್.ಎ.ಮಹಮ್ಮದ್ (74) ಗುರುವಾರ 9.00 ಗಂಟೆಗೆ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳುವಾಗ ದಾರಿ ಮಧ್ಯದಲ್ಲಿ ಹೃದಯಾಘಾತದಿಂದ ಮೃತರಾದರು. ಮೃತರು ಇಬ್ಬರು ಪುತ್ರಿಯರು,ಓರ್ವ ಪುತ್ರ, ಪತ್ನಿ ಹಾಗೂ ಸಹೋದರನನ್ನು ಅಗಲಿದ್ದಾರೆ.

ಹಿರಿಯ ಮೀನು ಉದ್ಯಮಿ ಎಮ್.ಎನ್. ಅಬ್ಧುಲ್ ಅವರ ಹಿರಿಯ ಮಗನಾದ ಮೃತರು ಬೆಳಕೊಂಡ ಮೀನುಗಾರ ಸಂಘಟನೆಯ ಅಧ್ಯಕ್ಷರಾಗಿ, ಟ್ರಾಲ್ ಬೋಟ್ ಯುನಿಯನ್ ಅಧ್ಯಕ್ಷರಾಗಿ, ಪರ್ಶಿಯನ್ ಬೋಟ್ ಯುನಿಯನ್ ಅಧ್ಯಕ್ಷರಾಗಿ, ಹಾಗೂ ಸಹಕಾರಿ ಹಂಚಿನ ಕಾರ್ಖಾನೆ ನಿರ್ದೇಶಕರಾಗಿ ದಿರ್ಘಕಾಲ ಕಾರ್ಯ ನಿರ್ವಹಿಸಿದ್ದರು.
ಮೀನುಗಾರರ ಪರ ಹೋರಾಟಗಳಲ್ಲಿ ಮುಂಚುಣಿಯಲ್ಲಿದ್ದು ಮಾರ್ಗದರ್ಶನ ನೀಡುತ್ತಿದ್ದ ಎಮ್.ಎ.ಮಹಮ್ಮದ್ ಮರಣಕ್ಕೆ ಭಟ್ಕಳ ಮಾಜಿ ಶಾಸಕ ಮಂಕಾಳ ವೈದ್ಯ, ಉದ್ಯಮಿ ಜೆ.ಟಿ.ಪೈ, ಮೀನುಗಾರ ಧುರಿಣರಾದ ವಿವನ್ ಫರ್ನಾಂಡಿಸ್, ರಾಜು ತಾಂಡೇಲ್, ರಾಜೇಶ ತಾಂಡೇಲ್, ಗಣಪತಿ ತಾಂಡೇಲ್, ರಾಜ್ಯ ಮೀನುಗಾರ ಸಂಘಟನೆಯ ಕಾರ್ಯದರ್ಶಿ ಚಂದ್ರಕಾಂತ ಕೊಚರೆಕರ್ ತೀವ್ರ ಸಂತಾಪ ಸೂಚಿಸಿದ್ದಾರೆ.
shri devaki krishna wash point karki naka honavar contact; sachin mesta 9538529046,8310014860
Leave a Comment