ರಾಷ್ಟ್ರೀಯ ಹೆದ್ದಾರಿ 69ರ ಹೊನ್ನಾವರ ತಾಲೂಕಿನ ಖರ್ವಾ ಕ್ರಾಸ್ ಸಮೀಪ ಕಾರ್ ಚಾಲಕನ ಅಜಾಗರೂಕತೆಯ ಚಾಲನೆಯಿಂದ ಎರಡು ಬೈಕ್ ಗೆ ಢಿಕ್ಕಿ ಸಂಭವಿಸಿ ಸವಾರರು ಗಂಭೀರ ಗಾಯಾಳುವಾದ ಘಟನೆ ರವಿವಾರ ನಡೆದಿದೆ.
ಆರೋಪಿತ ಚಾಲಕ ಬೆಂಗಳೂರಿನ ನಾಗದೇವನಹಳ್ಳಿಯ ಅಜೇಯ ಚಂದ್ರಶೇಖರ ಕೆ.ಎಂ ಎಂದು ಗುರುತಿಸಲಾಗಿದೆ.

ಗೇರುಸೊಪ್ಪಾದಿಂದ ಹೊನ್ನಾವರ ಮಾರ್ಗವಾಗಿ ಅತಿವೇಗ ಹಾಗು ನಿರ್ಲಕ್ಷತನದಿಂದ ಚಲಾಯಿಸಿ ಕೊಂಡು ಬಂದು ಖರ್ವಾ ಕ್ರಾಸ್ ಹತ್ತಿರ ಒಮ್ಮೆಲೆ ಕಾರನ್ನು ತನ್ನ ಬಲಬದಿಗೆ ಚಲಾಯಿಸಿ ಎರಡು ಬೈಕ್ ಗಳಿಗೆ ಗುದ್ದಿದ್ದಾನೆ.
ಬೈಕ್ ಸವಾರಾದ ತಾಲೂಕಿನ ಹೆರಂಗಡಿಯವರಾದ ಜುಲಫಿಕರ್ ಖಾಜಾ ಜುವಾಪು ಜಾಯಿಖಾಜಾ ಅಪ್ಕರ್ ಹಾಗೂ, ಗದಗ ಜಿಲ್ಲೆಯ ಹೊಸಳ್ಳಿಯ ಶಿವಯ್ಯ ಮಹಾಲಿಂಗಯ್ಯಗಣಾಚಾರಿ ಮತ್ತು ಕಾರ್ ನಲ್ಲಿದ್ದ ದೀಕ್ಷಿತ್ ಪ್ರಭು ಲಗ್ಗೆರೆ ಬೆಂಗಳೂರು ಹಾಗೂ ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ.ಎರಡು ಬೈಕ್ ಹಾಗೂ ಕಾರು ಜಖಂ ಆಗಿದೆ.ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
shri devaki krishna wash point karki naka honavar contact; sachin mesta 9538529046,8310014860
Leave a Comment