
ಯಲ್ಲಾಪುರ :ಪಟ್ಟಣದ ಪ್ರತಿಷ್ಠಿತ ವಾಯ್ ಟಿ ಎಸ್ ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗಜಾನನ ಭಟ್(75)ಅನಾರೋಗ್ಯದಿಂದ ಮಂಗಳವಾರ ಹೊನ್ನಾವರ ದಲ್ಲಿ ನಿಧನ ರಾಗಿದ್ದಾರೆ. ಅವರಿಗೆ ಮೂವರು ಪುತ್ರಿಯರು, ಓರ್ವ ಪುತ್ರ, ಸೇರಿದಂತೆ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.ಗಜಾನನಭಟ್ಟರು ವಾಣಿಜೋದ್ಯಮಿಯಾಗಿ ಧಾರ್ಮಿಕ ವಾಗಿ ಮತ್ತು ಸಾಮಾಜಿಕ ವಾಗಿ ,ಶೈಕ್ಷಣಿಕವಾಗಿ ಯಲ್ಲಾಪುರ ವನ್ನು ಕಟ್ಟಿಬೆಳಸುವಲ್ಲಿ ಶ್ರಮಿಸಿದ್ದರು , ಇವರ ಅಗಲಿಕೆಯಿಂದ ತುಂಬಲಾರದ ನಷ್ಟ ವುಂಟಾಗಿದೆ ಎಂದು ಗಣ್ಯರು ಊರಿನ ನಾಗರಿಕರು ಕಂಬನಿ ಮಿಡಿದಿದ್ದಾರೆ. ಯಲ್ಲಾಪುರ ದ ಅವರ ಸ್ವಗೃಹ ದಲ್ಲಿ ಮಧ್ಯಾಹ್ನ 3 ಗಂಟೆಗೆ ಅಂತಿಮ ದರ್ಶನ ಹಾಗೂ ಸಂಜೆ 6ಗಂಟೆಗೆ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವದು ಎಂದು ಅವರ ಕುಟುಂಬದವರು ತಿಳಿಸಿದ್ದಾರೆ
Leave a Comment