ಹೊನ್ನಾವರ; ಒಕ್ಕಲಿಗ ಯಕ್ಷಗಾನ ಬಳಗದ ಮೂರನೇ ವರ್ಷದ ಯಕ್ಷೊತ್ಸವ ಸಮಾರಂಭ ಹೊಳ್ಳಾಕುಳಿಯ ಒಕ್ಕಲಿಗ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಿರಿಯ ಜನಪದ ವಿದ್ವಾಂಸರು, ನಿವೃತ್ತ ಪ್ರಾಚಾರ್ಯರಾದ ಡಾ. ಎನ್.ಆರ್. ನಾಯಕ ಚಾಲನೆ ನೀಡಿದರು.
ನಂತರ ಸಭೆಯನ್ನುದ್ದೇಶಿ ಮಾತನಾಡಿ ಯಕ್ಷಗಾನದಲ್ಲಿ ಇಂದಿಗೂ ಜನಪದದ ಸೊಗಡು ಇದೆ. ಇದು ಆರಂಭದಲ್ಲಿ ಬುಡಕಟ್ಟು ಕಲೆಯಾಗಿದ್ದು, ಇದೀಗ ಸಾಂಸ್ಕ್ರತಿಕರಣಗೊಳಿಸಿದ ಕಲೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು, ಯಕ್ಷಗಾನದಿಂದಲೇ ಉಳಿಕ ಕಲೆ ಕನ್ನಡವನ್ನು ನಾಶ ಮಾಡುತ್ತಿದೆ.
ಅಲ್ಲದೇ ಈ ಕಲೆ ಸಾಂಸ್ಕ್ರತಿಕ ಸೊಗಡನ್ನು ಹೆಚ್ಚಿಸುತ್ತಿದ್ದು ಜಾಗತೀಕ ಮಟ್ಟದಲ್ಲಿಯೂ ಇದರ ಕಂಪನ್ನು ಪಸರಿಸಿದೆ. ಕಲೆ ಹಾಗೂ ಕಲಾವಿದರನ್ನು ಗೌರವಿಸೋಣ ಎಂದರು. ವೇದಿಕೆಯಲ್ಲಿ ಯಕ್ಷಗಾನ ಕಲಾವಿದರನ್ನು, ಕಲಾಪೋಷಕರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ ಸರ್ಕಾರಗಳು ಕೋವಿಡ್ ನೆಪವೊಡ್ಡಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುಮತಿ ನೀಡುತ್ತಿಲ್ಲ. ಆದರೆ ಚುನಾವಣೆಗೆ ಅವಕಾಶ ನೀಡುತ್ತಿದೆ. ಕಲೆ ಹಾಗೂ ಕಲಾವಿದರಿಗೆ ಕೊಡುಗೆ ನೀಡಲು ಸರ್ಕಾರ ಮುಂದಾಗಬೇಕಿದೆ. ಕಲಾವಿದರಿಗೆ ಭದ್ರತೆ ನೀಡುವಂತಾಗಬೇಕಿದೆ ಎಂದರು.
shri devaki krishna wash point karki naka honavar contact; sachin mesta 9538529046,8310014860
ವೇದಿಕೆಯಲ್ಲಿ ಕೆಳಗಿನೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಗೌಡ, ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ ಜೋಶಿ, ಜ್ಯಾತತೀತ ಜನತಾದಳದ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಒಕ್ಕಲಿಗ ಸಂಘದ ತಾಲೂಕ ಅಧ್ಯಕ್ಷ ತಿಮ್ಮಪ್ಪ ಗೌಡ, ಕರವೇ, ತಾಲೂಕ ಅಧ್ಯಕ್ಷ ಮಂಜುನಾಥ ಗೌಡ, ಯುವವೇದಿಕೆಯ ಅಧ್ಯಕ್ಷರಾದ ಶಂಕರ ಗೌಡ, ನಿವೃತ್ತ ಸೈನಿಕ ತಿಮ್ಮಪ್ಪ ಗೌಡ, ಯಕ್ಷಗಾನ ಕಲಾವಿದ ಗಣೇಶ ನಾಯ್ಕ ಮುಗ್ವಾ, ಅರುಣ ಗೌಡ ಮತ್ತಿತರರು ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಮೊದಲು ” ವೀರಮಣಿ ಕಾಳಗ”ಸಭಾ ಕಾರ್ಯಕ್ರಮದ ನಂತರ “ಸುದರ್ಶನ ವಿಜಯ, ಸುಧನ್ವಾರ್ಜುನ” ಯಕ್ಷಗಾನ ಪ್ರದರ್ಶನಗೊಂಡಿತು.
Leave a Comment