ಹೊನ್ನಾವರ ; ಕೊರೋನಾ ಸಂಕಷ್ಟದಿಂದ ಬಾಗಿಲು ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ಸೋಮವಾರದಿಂದ ಆರಂಭಗೊಂಡಿದೆ. ತಾಲೂಕಿನ 325 ಅಂಗನವಾಡಿಗಳು ಆರಂಭವಾಗಿದ್ದು, ಪಾಲಕರೊಡನೆ ಕೇಂದ್ರಕ್ಕೆ ಆಗಮಿಸುವ ದೃಶ್ಯ ಕಂಡು ಬಂದಿದೆ.
ಕೊರೋನಾ ಭೀತಿಯ ನಡುವೆಯೂ ರಾಜ್ಯಾದ್ಯಂತ ಹಂತಹಂತವಾಗಿ 1 ರಿಂದ 12 ನೇ ತರಗತಿಗಳನ್ನು ಆರಂಭಿಸಲಾಗಿತ್ತು. ಆ ಬಳಿಕ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಎಲ್ ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರ್ಧ ದಿನ ಭೌತಿಕ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು ಅಂಗನವಾಡಿ ಕೇಂದ್ರ ಆರಂಭದ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿತು.

ಸರ್ಕಾರದ ಆದೇಶದ ಬಳಿಕ ಅಂಗನವಾಡಿ ಕೇಂದ್ರವನ್ನು ಶೃಂಗಾರಗೋಳಿಸಿ ಅಂಗನವಾಡಿ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿ ಸಿಹಿ ತಿಂಡಿ ನೀಡಿ ಸ್ವಾಗತಿಸುವ ಮೂಲಕ ಕೇಂದ್ರಕ್ಕೆ ಆಇಕ್ಷಕರು ಬರಮಾಡಿಕೊಂಡರು
ಕಾಸರಕೋಡ ತೋಪ್ಪಲ ಅಂಗನವಾಡಿ ಕೇಂದ್ರದಲ್ಲಿ ವಿಶೇಷ ಅಲಂಕಾರದ ಮೂಲಕ ಸ್ವಾಗತಿಸಿದ್ದು, ಗ್ರಾಮ ಪಂಚಾಯತ ಸದಸ್ಯ ಪರಮೇಶ್ವರ ಮೇಸ್ತ ಮಾತನಾಡಿ ಕಳೆದ 2 ವರ್ಷದಿಂದ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಬಾರದೆ ಇರುವುದು ಎಲ್ಲಾ ತಾಯಂದಿರಿಗೆ ಬೇಸರದ ಸಂಗತಿಯಾಗಿತ್ತು. ಇಂದು ಮಕ್ಕಳಿಗೆ ತಾಯಂದಿರಿಗೆ ಖುಷಿ ತರುವ ದಿನವಾಗಿದೆ. ಕೇಂದ್ರ ಆರಂಭವಾಗಿದೆ ಕರೋನಾ ದೂರವಾಗಿದೆ ಎಂದು ನಿಲಕ್ಷ ಮಾಡದೇ ಸ್ವಚ್ಚತೆ ಕಡೆ ಗಮನಹರಿಸಿ ಎಂದರು.
ಶಿಸು ಅಭಿವೃದ್ದಿ ಅಧಿಕಾರಿ ವಿರುಪಾಕ್ಷಪ ಪಾಟೀಲ ಮಾತನಾಡಿ ಸರ್ಕಾರದ ಆದೇಶದಂತೆ ಅಂಗನವಾಡಿ ಆರಂಭಕ್ಕೂ ಮೊದಲು ವಿಶೇಷ ಮುತುವರ್ಜಿ ವಹಿಸಿ ಸ್ವಚ್ಚಗೊಳಿಸುವ ಕಾರ್ಯ ಮಾಡಲಾಗಿದೆ. ಹೆಚ್ಚಿನ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪಾಲಕರು ಯಾವುದೇ ಆತಂಕವಿಲ್ಲದೇ ಹಿಂದನಂತೆಯೇ ಕೇಂದ್ರಕ್ಕೆ ಕಳುಹಿಸಬಹುದು. ತಾಲೂಕಿನ ಕೇಂದ್ರದ ಯಾವುದೆ ಸಮಸ್ಯೆ ಇದ್ದಲ್ಲಿ ಗಮನಕ್ಕೆ ತಂದರೆ ಕೂಡಲೇ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಮೃತ್ ಲೋಪಿಸ್, ಆಶಾ ಕಾರ್ಯಕರ್ತೆ ನೆಬಲ್ ರೋಡ್ರಗೀಸ್, ಕಾರ್ಯಕರ್ತೆ ಮಂಗಲಾ ಗೌಡ. ಮಮತಾ ಮೇಸ್ತಾ, ಸಹಾಯಕಿ ವಸಂತಿ ರೋಡ್ರಗೋಸ್, ವಿದ್ಯಾ ಮೇಸ್ತಾ, ಪಾಲಕರು ತಾಯಂದಿರು ಹಾಜರಿದ್ದರು.
Leave a Comment