ಭಟ್ಕಳ: ಸಿಡಿಲು ಬಡಿದು ಮನೆಯೊಂದರ ಗೋಡೆ ಬಿರುಕು ಬಿಟ್ಟಿದ್ದು, 20ಕ್ಕೂ ಹೆಚ್ಚು ತೆಂಗಿನ ಮರಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಕೈಕಿಣಿ ಗ್ರಾಪಂ ವ್ಯಾಪ್ತಿಯ ಹೆರಾಡಿಯಲ್ಲಿ ನಡೆದಿದೆ.
ಮನೆಯ ಮಾಲಕರನ್ನು ಮಂಜುನಾಥ ದೇವಪ್ಪ ಶೆಟ್ಟಿ ಎಂದು ಗುರುತಿಸಲಾಗಿದೆ. ಮನೆಯಲ್ಲಿದ್ದ 6 ಜನರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ವಿದ್ಯುತ್ ಮೀಟರ್, ಸಕ್ರ್ಯೂಟ್ ಬೋರ್ಡ, ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ.

ತೋಟದಲ್ಲಿದ್ದ ತೆಂಗಿನ ಮರಗಳು ಸಿಡಿಲಿನ ಪರಿಣಾಮದಿಂದಾಗಿ ಒಣಗಿ ಒಂದೊಂದಾಗಿ ಧರೆಗೆ ಮುಖ ಮಾಡುತ್ತಿರುವುದು ಕಂಡು ಬಂದಿದೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ 2-3 ದಿನಗಳಿಂದ ಸಂಜೆ ಹಾಗೂ ರಾತ್ರಿಯ ವೇಳೆ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿಯುತ್ತಿದ್ದು, ಇಂದು ಮೋಡ ಕವಿದ ವಾತಾವರಣ ಇರುವುದು ಕಂಡು ಬಂದಿದೆ.
Leave a Comment