
ಯಲ್ಲಾಪುರ : ಧರ್ಮದಲ್ಲಿ ಸಂಸ್ಕೃತಿ ಅಡಗಿದೆ. ನಾವು ನೋಡುವ, ಮಾಡುವ ಪ್ರತಿ ಕಾರ್ಯದಲ್ಲಿ ಧರ್ಮವಿರಬೇಕು. ಅದೇ ಸಂಸ್ಕೃತಿಯಾಗಿ ಕಾಣಬಹುದು. ಮಾತೃದೇವೋ, ಪಿತೃದೇವೋ ಎನ್ನುವುದರಲ್ಲಿ ಧರ್ಮ ಸಂಸ್ಕೃತಿಯ ತಳಹದಿಯನ್ನು ಕಾಣಬಹುದು. ಹಾಗೆಯೇ ನಮ್ಮ ಪ್ರಾಚೀನ ಪರಂಪರೆಯಲ್ಲಿ ಮಾತ್ರ ಸಂಸ್ಕೃತಿಯ ಪ್ರತಿರೂಪವನ್ನು ಕಾಣಬಹುದು ಎಂದು ರಾಷ್ಟಿçÃಯ ಸ್ವಯಂ ಸೇವಕ ಸಂಘದ ಬೌದ್ಧಿಕ ಪ್ರಮುಖ ಡಾ.ರವಿಂದ್ರಜೀ ಹೇಳಿದರು.
ಅವರು ಪಟ್ಟಣದ ಗಾಂಧಿಕುಟೀರದಲ್ಲಿ ಸಂಕಲ್ಪ ಉತ್ಸವದ ಸಾಂಸ್ಕೃತಿಕ ಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.ನಾವು ಮಾಡುವ ಪ್ರತಿ ಕಾರ್ಯಗಳಲ್ಲಿಯೂ ಸತ್ಯಂ, ಶಿವಂ, ಸುಂದರA ಇರಬೇಕು. ಅಂದಾಗ ಮಾತ್ರ ಮೌಲ್ಯ ಬರುತ್ತದೆ. ಶ್ರೀರಾಮ-ಭರತ ರಾಜನಾಗುವುದಕ್ಕೆ ಪರಸ್ಪರ ನೀನಾಗು ಎಂದಿದ್ದರು. ಆದರೆ ಇಂದಿನ ರಾಜಕಾರಣಿಗಳು ನಾನಾಗುತ್ತೇನೆ ಎನ್ನುತ್ತಾರೆ. ಇದೇ ವಿಕೃತಿ
. ದೇವರ ಹೆಸರಲ್ಲಿಯೂ ವಿಕೃತಿಯನ್ನು ನಿರ್ಮಿಸುತ್ತಿದ್ದೇವೆ. ಭಾರತೀಯ ಸಂಸ್ಕೃತಿಯ ಪರಿಚಯವಾಗಬೇಕಾದರೆ ನಮ್ಮ ಪರಂಪರೆಯ ಮೌಲ್ಯದ ಚಿಂತನೆ ಗಟ್ಟಿಯಾಗಬೇಕು. ನಮ್ಮ ಪರಂಪರೆಯಿAದ ಬಂದAತಹ ಧರ್ಮ, ಸಂಸ್ಕೃತಿಯAತೆ ಸೂರ್ಯ ಉದಯಿಸುವ ಮೊದಲೇ ಸ್ನಾನ ಮಾಡಬೇಕು. ಅದರಲ್ಲೂ ತಲೆಯ ಮೇಲೆ ಬಿಸಿನೀರನ್ನು ಹಾಕಬಾರದು. ಅದು ನಮ್ಮ ಮನಸ್ಸು, ಬುದ್ಧಿಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತದೆ. ಹೀಗೆ ನಾವು ನಮ್ಮ ಸಂಸ್ಕೃತಿಯನ್ನು ನಮ್ಮನಮ್ಮ ಅನುಕೂಲಕ್ಕಾಗಿ ವಿಕೃತಿಯೆಡೆಗೆ ಒಯ್ಯುತ್ತಿದ್ದೇವೆ ಎಂದರು.
ಜಿಲ್ಲಾ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎನ್.ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಸಂಕಲ್ಪದ ರೂವಾರಿ ಪ್ರಮೋದ ಹೆಗಡೆ ವೇದಿಕೆಯಲ್ಲಿದ್ದರು.
ಶ್ರೀಪಾದ ಭಟ್ಟ ದೇಶಭಕ್ತಿಗೀತೆಯೊಂದಿಕೆ ಆರಂಭಗೊAಡ ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ಗಾಂವ್ಕರ್ ಸ್ವಾಗತಿಸಿದರು. ಸಂಕಲ್ಪದ ಸಂಚಾಲಕ ಪ್ರಸಾದ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಲಾ ಭಟ್ಟ ನಿರ್ವಹಿಸಿದರು. ಶ್ರೀಪಾದ ಎನ್. ಭಟ್ಟ ಸಾತೊಡ್ಡಿ ವಂದಿಸಿದರು.
Leave a Comment