ಹೊನ್ನಾವರ: ತಾಲೂಕಿನ ಕಾಸರಕೋಡ್ ಇಕೋ ಪಾರ್ಕ ಪ್ರವಾಸಿಗರನ್ನು ತನ್ನಡೆಗೆ ಸೆಳೆಯುತ್ತಿದೆ. ಆದರೆ ಇಲ್ಲಿ ನಿರ್ವಹಣೆ ಮಾಡಬೇಕಾದವರ ಅಸರ್ಮಪಕ ನಿರ್ವಹಣೆಯಿಂದ ಪಾರ್ಕ ಸೊಬಗು ಕುಂದುತ್ತಿದೆ.
ಬ್ಯ್ಲೂಪ್ಯಾಗ್ ಮಾನ್ಯತೆ ಪಡೆದ ಇಕೋ ಬೀಚ್ ಸನಿಹದಲ್ಲೆ ಇರುವ ಇಕೋ ಪಾರ್ಕನ ಸೌಂದರ್ಯ ವಿಕ್ಷಿಸಲು ದೇಶದ ವಿವಿದಡೆಯಲ್ಲದೇ ವಿದೇಶದಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಇಲ್ಲಿಯ ಸೌಂದರ್ಯ ಹೆಚ್ಚಿಸಲು ನಿರ್ಮಿಸಿದ ವಿವಿಧ ಕಲಾಕೃತಿಗಳು ಹಾನಿಯಾದರೂ ಅದರ ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ.
ಪ್ರವಾಸಿಗರು ಪ್ರಕೃತಿ ಸೌಂದರ್ಯ ಕುತಿತುಕೊಂಡು ಆಸ್ವಾಧಿಸಲು ಮಾಡಲಾದ ಬೆಂಚುಗಳು ಅಪಾಯ ಸ್ಥಿತಿ ಇದ್ದರೂ ಮೇಲ್ಘಾವಣೆ ಈಗಲೋ ಆಗಲೋ ಮುರಿದು ಬೀಳುವಂತಿದೆ. ಕೆಲವು ಕಡೆ ಮೇಲ್ಘಾವಣೆಯ ತಗಡು ತುಕ್ಕು ಹಿಡಿದಿದೆ. ಕುಡಿಯಲು ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ. ಅಲ್ಲಲ್ಲಿ ನೀರಿನ ಬಾಟಲಿ, ಪ್ಲಾಸ್ಟಿಕ್ ಬಿದ್ದು, ಸ್ವಚ್ಚತೆ ಮರಿಚೀಕೆಯಾಗಿದೆ. ಪಾರ್ಕ ಪಕ್ಕದಲ್ಲೆ ಒಂದು ಹೊಂಡದಲ್ಲಿ ಅಲ್ಲಲ್ಲಿ ಬಿದ್ದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳನ್ನು ತುಂಬುತ್ತಿದ್ದು, ನಿರ್ವಹಣೆಯಾಗುತ್ತಿಲ್ಲ. ಶೌಚಾಲಯದ ಸ್ಥಿತಿ ಹೇಳತೀರದಾಗಿದ್ದು, ಗಬ್ಬೆದ್ದು ನಾರುತ್ತಿದೆ. ಇಲ್ಲಿ ನೀರಿನ ವ್ಯವಸ್ಥೆಯು ಇಲ್ಲ. ಬಾಗಿಲು ಸರಿಯಾಗಿಲ್ಲ. ಮೇಲ್ಚಾವಣೆಯ ತಗಡು ಮುರಿದು ಬಿದ್ದು ವರ್ಷಗಳೇ ಉರುಳಿದೆ.





ಶುಲ್ಕ ವಸೂಲಿ ಮಾಡಿದರೂ ನಿರ್ವಹಣೆ ಇಲ್ಲ.
ಪ್ರತಿಯೊರ್ವರಿಗು ಪ್ರವೇಶ ಶುಲ್ಕ 10ರೂ ಪಡೆದು ವಾಹನ ಒಂದಕ್ಕೆ ಪಾರ್ಕಿಂಗ್ ಶುಲ್ಕ ಪ್ರತೈಕ 10 ರೂಪಾಯಿ ಪಡೆಯಲಾಗುತ್ತದೆ. ದಿನಕ್ಕೆ ಕನಿಷ್ಟವೆಂದರೂ ಐದುನರರಿಂದ ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ. ರಜಾ ಅವಧಿ ಹಾಗೂ ಶನಿವಾರ ಭಾನುವಾರು ಐದು ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದರೂ ಸಾಕಷ್ಟು ಸಂಖ್ಯೆಯಲ್ಲಿ ಹಣ ಸಂಗ್ರಹವಾಗಲಿದೆ. ಸಂಗ್ರಹವಾದ ಹಣದಲ್ಲಿ ನಿರ್ವಹಣೆ ಮಾಡಿದರೂ ವ್ಯವಸ್ಥೆ ಸರಿಪಡಿಸಬಹುದು. ಆದರೆ ಆ ಕಾರ್ಯ ಟೆಂಡರ್ ಪಡೆದವರು ಮಾಡುತ್ತಿಲ್ಲ. ಸಂಭದಿಸಿದ ಇಲಾಖೆಯು ಈ ಬಗ್ಗೆ ಗಂಭೀರ ಚಿಂತನೆ ನಡೆಸಿದಂತೆ ಕಾಣಿಸುತ್ತಿಲ್ಲ. ಅಲ್ಲದೇ ಇತ್ತೀಚೀನ ದಿನದಲ್ಲಿ ಸಾಲಾ ಕಾಲೇಜು ಸಮವಸ್ತ್ರದಲ್ಲಿಯೇ ಆಗಮಿಸಿ ಅಸಹ್ಯಪಡುವ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ಕೆಲವೊಂದು ಬಾರಿ ಅರೆನಗ್ನ ಅವಸ್ಥೆಯಲ್ಲಿ ಗಿಡಗಳ ಸಮೀಪ ಕುಳಿತುಕೊಳ್ಳುತ್ತಿರುವುದು ಕುಟುಂಬ ಸಮೇತ ಬರುವವರಿಗೆ ಮುಜಗರ ಉಂಟು ಮಾಡುತ್ತಿದೆ. ಸಂಭದಿಸಿದ ಇಲಾಖೆಯವರು ಈ ಬಗ್ಗೆ ವಿಶೇಷ ಗಮನಹರಿಸಿ ಕೂಡಲೇ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕಿದೆ
…………………
ಉತ್ತಮವಾದ ಪ್ರಕೃತಿ ಸೌಂದರ್ಯದ ಮಧ್ಯೆ ಈ ಸ್ಥಳವಿದೆ. ಮಕ್ಕಳಿಂದ ಹಿರಿಯರವರೆಗೂ ಇಲ್ಲಿಯ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ. ಇತ್ತಿಚೀನ ದಿನದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅಸಹ್ಯ ರೀತಿಯಲ್ಲಿ ಬಹಿರಂಗವಾಗಿ ವರ್ತಿಸಿದರೂ ಯಾರು ಇವರಿಗೆ ಎಚ್ಚರಿಕೆ ನೀಡುತ್ತಿಲ್ಲ. ಶೌಚಾಲಯ ಸಮಸ್ಯೆ ಇದ್ದು ಅದರ ನಿರ್ವಹಣೆ ಸರ್ಮಪಕವಾಗಿ ಮಾಡಲಿ ಪ್ರಶದ್ನೆ ಮಾಡಿದರೆ ಹಾರಿಕೆ ಉತ್ತರ ನೀಡುತ್ತಾರೆ. ಮಾನಹಾನಿಯಾಗುವ ರೀತಿಯಲ್ಲಿ ಸಿಬ್ಬಂದಿಗಳು ಗುಂಪುಗೂಡಿ ವರ್ತನೆ ಮಾಡುತ್ತಿರುವುದು ಬೇಸರ ಮೂಡಿಸುತ್ತಿದೆ.
ಶ್ರೀಧರ ನಾಯ್ಕ ಪ್ರವಾಸಿಗರು
shri devaki krishna wash point karki naka honavar contact; sachin mesta 9538529046,8310014860
Leave a Comment