
ಯಲ್ಲಾಪುರ: ಪ್ರಯಾಣಿಕರನ್ನು ಇಳಿಸುತಿದ್ದ ವಾಕರಾಸಂಸ್ಥೆ ಬಸ್ಸಿನ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ಪಟ್ಟಣದ ಗಾಂಧಿ ಚೌಕದಲ್ಲಿ ನಡೆದಿದೆ.ಅಂಕೊಲಾ ಕಡೆಯಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದ ಲಾರಿ ನಿಂತ ಬಸ್ಸಿಗೆ ಹೊಡೆದಿದೆ. ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರಸ್ತೆ ಬದಿ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತಿದ್ದ ಬಸ್ ಗೆ ಲಾರಿ ಗುದ್ದಿದೆ. ಪರಿಣಾಮ ನಿರ್ವಾಹಕ ಸೇರಿದಂತೆ ಮೂವರಿಗೆ ಗಾಯವಾಗಿದೆ.

ಮಹಿಳೆಯೊಬ್ಬಳಿಗೆ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಲಾರಿ ಚಾಲಕ ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಯೋಗೇಶ ಬಬಣ ಸಿಂಧೆ ವಿರುದ್ಧ ಪ್ರಕರಣ ದಾಖಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment