
ಯಲ್ಲಾಪುರ : ಉದ್ಯಮಿ, ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಜಿ ಎಸ್ ಬಿ ಸಮಾಜದ ಪ್ರಮುಖರಾಗಿದ್ದ ದಿ.ಗಜಾನನ ಬಾಬುರಾವ ಭಟ್ ಅವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ ರವಿವಾರ ಪಟ್ಟಣದ ವೆಂಕಟ್ರಮಣ ಮಠದ ಸಭಾಭವನದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹೊನ್ನಾವರ ವೆಂಕಟರಮಣ ದೇÀವಸ್ಥಾನದ ಅರ್ಚಕರಾದ ವೇದ ಮೂರ್ತಿ ಮುಕುಂದ ಭಟ್ಟ ಬ್ಯಾರಳ್ಳಿ, ಮಾತನಾಡಿ ದಿ.ಗಜಾನನ ಭಟ್ಟರವರು ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಮೋಕ್ಷಕ್ಕೆ ಬೇಕಾದ ಎಲ್ಲ ಕಾರ್ಯವನ್ನು ಅವರು ಈ ಜನ್ಮದಲ್ಲಿ ಮಾಡಿದ್ದಾರೆ. ಪರಮಾತ್ಮನ ಅನುಗ್ರಹದಿಂದ ಅವರಿಗೆ ಮೋಕ್ಷ ಪ್ರಾಪ್ತವಾಗುತ್ತದೆ. ಗಜಾನನ ಭಟ್ಟರು ಅದನ್ನು ಸಾಧಿಸಿದ್ದಾರೆ. ಅನೇಕ ಧಾರ್ಮಿಕ ಕಾರ್ಯದ ಜವಾಬ್ದಾರಿ ಹೊತ್ತು ದೇವರ ಮನಸ್ಸನ್ನು ಗೆದ್ದಿದ್ದಾರೆ. ಈ ಶ್ರದ್ಧಾಂಜಲಿ ಸಭೆ ಅವರ ಗುಣಗಾನ ಹಾಗೂ ಅವರ ಆತ್ಮಕ್ಕೆ ಶಾಂತಿ ದೊರಕಿಸುವುದಾಗಿದೆ ಎಂದ ಅವರು ಪರ್ತಗಾಳಿ ಮಠದ ಪೂಜ್ಯ ವಿದ್ಯಾಧೀಶ ತೀರ್ಥ ಶ್ರೀಗಳ ಸಂದೇಶವನ್ನು ವಾಚಿಸಿ, ದಿ.ಗಜಾನನ ಭಟ್ಟ ಅವರು, ಗೋವಾ ಪರ್ತಗಾಳಿ ಮಠ ಹಾಗೂ ಸಮಾಜದ ಬಗ್ಗೆ ಚಿಂತನಶೀಲ ವ್ಯಕ್ತಿಯಾಗಿದ್ದರು. ಯಲ್ಲಾಪುರ ಭಟ್ಟ ಕುಟುಂಬದ ಹಿರಿಮೆ ಗರಿಮೆ ನಬದೆತ್ತರಕ್ಕೆ ಏರಿಸಿದ ಧೀಮಂತ ವ್ಯಕ್ತಿಯಾಗಿದ್ದರು
ಜನ್ಮ ಪಡೆದಾತನಿಗೆ ಮರಣ ತಪ್ಪದು. ದೇವರು ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಕುಟುಂಬದವರಿಗೆ ನೀಡಲಿ ಎಂದು ತಿಳಿಸಿದ್ದಾರೆ .
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ದಿ ಗಜಾನನ ಭಟ್ಟರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಈ ಸಂದ¨sðದಲ್ಲಿ ತಹಶೀಲ್ದಾರ ಶ್ರೀಕೃಷ್ಣ ಕಾಮಕರ, ಶ್ರೀಕೃಷ್ಣ ಮಿಲ್ಕ÷್ಸ ಮಾಲಕ ಸತೀಶ ಪೈ ,ಉಡುಪಿಯ ಗೋಪಾಲಕೃಷ್ಣ ನಾಯಕ ಗುಜಾಡಿ, ಕಾಮತ್ ಗ್ರೂಪ್ ಆಪ್ ಹೋಟೆಲ್ಸ ನ ರಾಮಚಂದ್ರ ಕಾಮತ, , ಪಟ್ಟಣ ಪಂಚಾಯತ ಉಪಾದ್ಯಕ್ಷೆ ಶ್ಯಾಮಿಲಿ ಪಾಠಣಕರ , ಮಂಡಲಾಧ್ಯಕ್ಷ ಜಿ.ಎನ್ ಗಾಂವ್ಕರ್, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷಎಸ್ ಎನ್ ಭಟ್ಟ ಏಕಾನ, ಉದ್ಯಮಿ ಬಾಲಕೃಷ್ಣ ನಾಯಕ,ನಿವೃತ್ರ ಪ್ರಾಂಶುಪಾಲ ಜಯರಾಮ ಗುನಗಾ ಪ್ರಮುಖರಾದ ಮುರುಳಿ ಹೆಗಡೆ ಶೀರೀಷ ಪ್ರಭು, ಉಮೇಶ ಭಾಗ್ವತ್, ಉದ್ಯಮಿಗಳಾದ ರಾಜನ ,ನಂದನ ಬಾಳಿಗಿ,ಮುಂತಾದವರು ಇದ್ದರು.ದಿ ಗಜಾನನ ಭಟ್ಟ ಅವರ ಪುತ್ರ ಹೃಷಿಕೇಶ ಭಟ್ಟ ಹಾಗೂ ಕುಟುಂಬದವರು ಧಾರ್ಮಿಕ ವಿಧಿಗಳನ್ನು ಪೂರೈಸಿದರು. ಉದ್ಯಮಿ ರವಿ ಶಾನಭಾಗ ನಿರ್ವಹಿಸಿದರು
Leave a Comment