ಪ್ರೇಮಂ ಪೂಜ್ಯಂ ಚಲನಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ನಟಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯೆನಿಸುತ್ತದೆ. ಚಿತ್ರಕ್ಕೆ ಪ್ರೀತಿ, ಸಹಕಾರ ನೀಡಿ ಪ್ರೋತ್ಸಾಹ ನೀಡಿ ಬೆಂಬಲಿಸಿ ಎಂದು ನಟಿ ಬ್ರಂದಾ ಆಚಾರ್ಯ ಹೊನ್ನಾವರದಲ್ಲಿ ಹೇಳಿದರು ಪಟ್ಟಣದ ಸೋಶಿಯಲ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ನಟಿಯಾಗುತ್ತೇನೆ ಎಂಬ ಕಲ್ಪನೆ ಇಲ್ಲದೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹಲವಾರು ಜನರ ಸಹಕಾರ ಲಭಿಸಿದೆ.
ನನ್ನ ಕುಟುಂಬಸ್ಥರ ಹೆಚ್ಚಿನ ಪ್ರೋತ್ಸಾಹ ನೀಡಿದರು. ಪ್ರೇಮಂ ಪೂಜ್ಯಂ ಚಿತ್ರದ ಕಥೆ ಬಹಳ ಇಷ್ಟವಾಗಿತ್ತು ಅದಕ್ಕೆ ನಟಿಸಲು ಒಪ್ಪಿಕೊಂಡೆ. ನನ್ನ ಪ್ರಥಮ ಸಿನಿಮಾ ಆದರೂ ಕೂಡ ನಟ ಪ್ರೇಮ್ ಹಾಗೂ ಚಿತ್ರತಂಡ ಉತ್ತಮ ಭಾಂದವ್ಯದೊಂದಿಗೆ ಪ್ರೋತ್ಸಾಹ ಸಿಕ್ಕಿತು. ಅವಿನಾಶ್ ರಂತಹ ಹಿರಿಯ ನಟರ ಜೊತೆ ಮೊದಲ ಸಿನಿಮಾ ದಲ್ಲಿ ನಟಿಸಿರುವುದು ನನ್ನಭಾಗ್ಯವೇ ಸರಿ.

ಪ್ರೇಮಂ ಪೂಜ್ಯಂ ಸಿನಿಮಾ ನೋಡಿದ ಜನರ ಮುಖದ ಮೇಲಿನ ನಗು ನೋಡುವುದೇ,ಅವರ ಅನಿಸಿಕೆಗಳು,ಚಿತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹ, ನೋಡಿ ಹೆಮ್ಮೆ ಎನಿಸುತ್ತದೆ. ಇದೇ ತರಹ ಸಹಕಾರ ನೀಡಿದರೆ ಉತ್ತಮ ಸಂದೇಶ ಇರುವ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದರು.
ಈಗಾಗಲೇ ಕೆಲವು ಸಿನಿಮಾಗಳಿಗೆ ಆಫರ್ ಬಂದಿದೆ ಕಥೆ ಕೇಳಿದ್ದೇನೆ ಇನ್ನೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ ಎಂದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಬರಗಾಲವಿಲ್ಲ ಸೂಕ್ತ ವೇದಿಕೆ ಸಿಗಬೇಕಿದೆ ಪ್ರತಿಭೆಗಳು ತಮಗೆ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಇಷ್ಟವಾದ ಕ್ಷೇತ್ರಗಳಲ್ಲಿ ಮುಂದುವರೆಯಬೇಕು ದೃಢನಿರ್ಧಾರ ಮುಖ್ಯ ಮತ್ತು ಹೆಚ್ಚಿನ ಶ್ರಮ ವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ್, ಶ್ರೀಧರ್ ಆಚಾರ್ಯ,ಮಾದೇವಿ ಆಚಾರ್ಯ,ಗುರುಕುಮಾರ್ ಉಪಸ್ಥಿತರಿದ್ದರು.
shri devaki krishna wash point karki naka honavar contact; sachin mesta 9538529046,8310014860
Leave a Comment