
ಯಲ್ಲಾಪುರ : ಪಟ್ಟಣದ ನಿವೃತ್ತದೈಹಿಕ ಶಿಕ್ಷಕ ತಾಂಡೂರಾಯನ್ಅವರು ಪ್ರತಿದಿನ ಕಾಳಮ್ಮನಗರದ ತಾಲೂಕಾಕ್ರೀಡಾಂಗಣದಲ್ಲಿಕ್ರೀಡಾಸಕ್ತ ಮಕ್ಕಳಿಗೆ ಉಚಿತವಾಗಿತರಬೇತಿ ನೀಡುತ್ತಿದ್ದು, ಅವರಲ್ಲಿತರಬೇತಿ ಪಡೆದಯಲ್ಲಾಪುರದ ೭ ಕ್ರೀಡಾಪಟುಗಳು ಜಿಲ್ಲಾಮಟ್ಟದಲ್ಲಿ ನಡೆದಕಿರಿಯರಅಥ್ಲೆಟಿಕ್ ನಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ.
ಇತ್ತೀಚಿಗೆಕಾರವಾರ ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಉತ್ತರಕನ್ನಡಜಿಲ್ಲಾಅಥ್ಲೆಟಿಕ್ ಅಸೋಸಿಯೇಷನ್ನಿಂದಜಿಲ್ಲಾ ಮಟ್ಟದಕಿರಿಯರಅಥ್ಲೆಟಿಕ್ಕೀಡಾಕೂಟ ಹಾಗೂ ರಾಷ್ಟ್ರೀಯ ಮಟ್ಟದ ಮೀಟ್ಆಯ್ಕೆ ಪ್ರಕ್ರಿಯೆಯಲ್ಲಿ ೧೨ರ ವಯೋಮಿತಿಯಲ್ಲಿ ಶ್ರೇಯಾ ಮಂಜುನಾಥಜೋಗಿ ೩೦೦ಮಿ. ಪ್ರಥಮ, ಸಮರ್ಥಉಪಾಧ್ಯಾಯಉದ್ದಜಿಗಿತ ದ್ವಿತೀಯ, ೧೪ರ ವಯೋಮಿತಿಯಲ್ಲಿ ಮಾಯಾ ವಾಲ್ಮಿಕಿಉದ್ದಜಿಗಿತ ಪ್ರಥಮ, ಸೋನಿಯಾರೇವಣಕರಗುಂಡುಎಸೆತ ದ್ವಿತೀಯ, ಶ್ರೀದೇವಿ ಗಂಗಾ ನಾಯ್ಕ ೬೦ಮೀ. ಪ್ರಥಮ, ೧೬ರ ವಯೋಮಿತಿಯಲ್ಲಿ ನಿರೀಕ್ಷತ್ ನಾಯ್ಕಚಕ್ರಎಸೆತ ಪ್ರಥಮ, ನೇಸರ್ಗೌಡಜ್ಯಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದುರಾಜ್ಯ ಮಟ್ಟಕ್ಕೆಆಯ್ಕೆಯಾದ ಕ್ರೀಡಾಪಟುಗಳಾಗಿದ್ದಾರೆ.
Leave a Comment