ಹುಬ್ಬಳ್ಳಿ : ಇಪಿಎಸ್ ಪಿಂಚಣಿದಾರರು ಒಂದು ವರ್ಷದವರೆಗೆ ಮಾಸಿಕ ಪಿಂಚಣಿ ಪಾವತಿಯನ್ನು ಮುಂದುವರೆಸಲು ವರ್ಷದಲ್ಲಿ ಯಾವುದೇ ಸಮಯದಲ್ಲಿ ಜೀವನ ಪ್ರಮಾಣ ಪತ್ರ ಡಿಜಿಟಲ್ ಲೈಫ್ ಪ್ರಮಾಣಪತ್ರ ನೋಂದಾಯಿಸಿಕೊಳ್ಳಬಹುದು.
ಈಗ ಜೀವನ ಪ್ರಮಾಣಪತ್ರವು ನೋಂದಾಯಿಸಿದ ದಿನದಿಂದ ೧ ವರ್ಷದವರೆಗೆ ಮಾನ್ಯವಾಗಿರುತ್ತದೆ. ೨೦೨೧ ರಲ್ಲಿ ಪಿಂಚಣಿ ಪಾವತಿ ಆದೇಶವನ್ನು ನೀಡಲಾದ ಹೊಸ ಪಿಂಚಣಿದಾರರು ಪಿಪಿಒ ನೀಡಿದ ದಿನಾಂಕದಿAದ ೧ ವರ್ಷದವರೆಗೆ ಜೀವನ ಪ್ರಮಾಣಪತ್ರ ಸಲ್ಲಿಸುವ ಅವಶ್ಯಕತೆಯಿಲ್ಲ. ಆನ್ ಲೈನ್ ಜೀವನ ಪ್ರಮಾಣಪತ್ರವನ್ನು ಸಾಮಾನ್ಯ ಸೇವಾ ಕೆಂದ್ರಗಳು.
ಅಂಚೆ ಕಚೇರಿ ಮೂಲಕ ಅಥವಾ ಪಿಂಚಣಿ ವಿತರಣಾ ಬ್ಯಾಂಕ್ ಮೂಲಕ ಸಲ್ಲಿಸಬಹುದು. ಡಿಜಿಟಲ್ ಲೈಫ್ ಪ್ರಮಾಣ ಪತ್ರ ಸಲ್ಲಿಸಲು ಸಾಮಾನ್ಯ ಸೇವಾ ಕೇಂದ್ರದ ವಿವರಗಳನ್ನು https://locator. csccloud.in ಲಿಂಕ್ ಮೂಲಕ ಸಲ್ಲಿಸಬೇಕು.
ಅನಾರೋಗ್ಯದಿಂದ ಬಳಲುಸತ್ತಿರುವ ಪಿಂಚಣಿದಾರರ ಕುಟುಂಬದ ಸದಸ್ಯರು ಕಚೇರಿಯ ತಿಳಿಸಿದರೆ ಕಚೇರಿಯಿಂದ ಡಿಜಿಟಲ್ ಲೈಫ್ ಪ್ರಮಾಣಪತ್ರ ವನ್ನು ನೊಂದಾಯಿಸಲು ಅಗತ್ಯ ವ್ಯವಸ್ಥೆ ಮಾಡಲಾಗುವುದು ಎಂದು ಸಹಾಯಕ ಭವಿಷ್ಯ ನಿಧಿ ಆಯುಕ್ತ ವಿರೇಶ ಟಿ. ಆರ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Leave a Comment