
ಯಲ್ಲಾಪುರ.ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನಡೆದ ದೇಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ನವರು (ಐ.ಸಿ.ಎ.ಆರ್.) ನಡೆಸಿದ ರಾಷ್ಟ್ರ ಮಟ್ಟದ ಜೆ.ಆರ್.ಎಫ್. ಪರಿಕ್ಷಾ ಫಲಿತಾಂಶ ಮಂಗಳವಾರ ಸಂಜೆ ಪ್ರಕಟವಾಗಿದ್ದು, ಈ ಫಲಿತಾಂಶದಲ್ಲಿ ಯಲ್ಲಾಪುರ ಪಟ್ಟಣದ ಪವಿತ್ರಮಾತಾ ಭಟ್ ಅವರು ದೇಶಮಟ್ಟದಲ್ಲಿ ೩೨ ನೇ ರ್ಯಾಂಕ್ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಸ್ಯ ವಿಜ್ಞಾನ (ಪ್ಲಾಂಟ್ ಸೈನ್ಸ್) ವಿಭಾಗದಲ್ಲಿ ಇವರಿಗೆ ಈ ರ್ಯಾಂಕ್ ದೊರೆತಿದೆ. ದೇಶದ ವಿವಿದೆಡೆಯ ೩೦ ಸಾವಿರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಈ ಪರಿಕ್ಷೆಯಲ್ಲಿ ಪಾಲ್ಗೊಂಡಿದ್ದರು. ಪವಿತ್ರಮಾತಾ ಭಟ್ ಅವರು ಪ್ರಸಕ್ತ ಸಾಲಿನಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್.ಸಿ. ಅಗ್ರಿ ಪದವಿ ಪೂರೈಸಿದ್ದಾರೆ. ಇವರು ಯಲ್ಲಾಪುರದ ಪತ್ರಕರ್ತ ಜಿ.ಎನ್.ಭಟ್ ತಟ್ಟಿಗದ್ದೆ ಹಾಗೂ ಲಲಿತಾ ಭಟ್ ದಂಪತಿಯ ಪುತ್ರಿ.
ಯಲ್ಲಾಪುರ ಹಾಗೂ ಸುದ್ದಿಗಾಗಿ
ಗ್ರುಪ್ ಸೇರಲು ಈ ಲಿಂಕ್ ಒತ್ತಿ https://chat.whatsapp.com/D0Ry5Povwke1s77ibSLq4A
Leave a Comment