• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಇಂದಿನಿಂದ ಮಂಚಿಕೇರಿಯಲ್ಲಿ ‘ಕಾಲಚಕ್ರ’ ವಿಶೇಷ ರಂಗಪ್ರಯೋಗ

November 17, 2021 by Jayaraj Govi Leave a Comment

FB IMG 16370824332839372

ಯಲ್ಲಾಪುರ: ತಾಲೂಕಿನ ಮಂಚೀಕೇರಿಯರಂಗ ಸಮೂಹ ಇವರ ಆಶ್ರಯದಲ್ಲಿ ರಂಗ ಪ್ರದರ್ಶನ ‘ಕಾಲ ಚಕ್ರ’ ನಾಟಕ ಪ್ರದರ್ಶನ ನ. 17 ರಿಂದ 20 ರ ವರೆಗೆ ನಡೆಯಲಿದೆ. ಮಂಚಿಕೇರಿ ಸಮೀಪದ ಜೋಗಭಟ್ರಕೇರಿಯ ‘’ ಜಿ. ಎನ್. ಶಾಸ್ತ್ರಿ ಯವರ ನಂದನಂ ಮನೆಯಲ್ಲಿ ಪ್ರತಿದಿನ ಸಂಜೆ ನಡೆಯಲಿದೆ.

FB IMG 16370827462581653


ನಾಟಕದ ರಚನೆಯ ಮೂಲ ಮರಾಠಿಯ ಜೈವಂತ ದಳ್ವಿಯವರಾಗಿದ್ದು, ಕನ್ನಡಕ್ಕೆ  ಎಚ್. ಕೆ. ಕರ್ಕೆರಾ ಅನುವಾದಿಸಿದ್ದಾರೆ. ವಿನ್ಯಾಸ ಮತ್ತು ನಿರ್ದೇಶನವನ್ನು ಹುಲುಗಪ್ಪ ಕಟ್ಟಿಮನಿ ಮಾಡಲಿದ್ದು, ಸಹ ನಿರ್ದೇಶನ ಸಾಲಿಯಾನ್ ಉಮೇಶ ನಾರಾಯಣ ಅವರದ್ದಾಗಿದೆ.
ಮಂಚಿಕೇರಿ ಪ್ರದೇಶದಲ್ಲಿ ಸಾಂಸ್ಕೃತಿಕ ಪೂರಕ ವಾತಾವರಣ ಇದೆ. ಮಂಚಿಕೇರಿ ರಂಗ ಸಮೂಹ ಕಾರ್ಯಚಟುವಟಿಕೆಗಳಿಗೆ ಅಲ್ಲಿನ ನಾನಾ ಸಂಘ ಟನೆಗಳ ಸಹಯೋಗವಿದೆ. ಈಗ ಪ್ರಸ್ತುತಪಡಿಸುತ್ತಿರುವ ಈ ನಾಟಕದ ಪಾತ್ರಧಾರಿಗಳು ಹೆಚ್ಚಾಗಿ ಕೃಷಿ ಮೂಲದಿಂದ ಬಂದವರು. , ಗೃಹಿಣಿಯರು, ವಿದ್ಯಾರ್ಥಿಗಳು, ಶಿಕ್ಷಕರು. ಹೀಗೆ ವಿವಿಧ ಹಿನ್ನೆಲೆ ಉಳ್ಳವರು ಇದ್ದಾರೆ.

FB IMG 16370824698598508


ನಾಟಕದ ಪಾತ್ರಧಾರಿಗಳಾಗಿ ರಂಗ ನಿರ್ದೇಶಕ ಎಮ್ ಕೆ ಭಟ್ಟ ಯಡಳ್ಳಿ, ಆರ್ ಎನ್ ಭಟ್ಟ ದುಂಡಿ, ಯಕ್ಷಗಾನ ಕಲಾವಿದೆ ನಿರ್ಮಲಾ ಗೋಳಿಕೊಪ್ಪ, ಶಿಕ್ಷಕ ಪ್ರಕಾಶ ಭಟ್ಟ ಸೇರಿದಂತೆ ಇನ್ನಿತರ ಕಲಾವಿದರು ನಟಿಸಿದ್ದಾರೆ .
ಈ ರಂಗ ಪ್ರಯೋಗದ ವಿಶೇಷತೆಯೆಂದರೆ ಅದು ರಂಗ ವೇದಿಕೆಯಲ್ಲಿ ನಡೆಯುತ್ತಿಲ್ಲ. ಹಳ್ಳಿಯ ಹಳೆಯ ಮನೆ ಮಾಳಿಗೆ ಮೇಲೆ ನಾಟಕದ ಮೊದಲನೆ ಅಂಕ ಮತ್ತು ಜಗುಲಿ ಮೇಲೆ ಎರಡನೆ ಅಂಕ ಪ್ರದರ್ಶನ ಏರ್ಪಾಟಾಗಿದೆ.

ಕಾಲಚಕ್ರ ನಾಟಕದಲ್ಲಿ ಎರಡು ಮನೆಗಳಲ್ಲಿ ನಡೆಯುವ ತಳಮಳದ ಚಿತ್ರಣವಿದೆ.  ರಂಗವೇದಿಕೆಯ ಬದಲು ಮನೆಯ ಜಗುಲಿ ಮತ್ತು ಮಾಳಿಗೆಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಂಚಿಕೇರಿ ರಾಜರಾಜೇಶ್ವರಿ ರಂಗಸಮೂಹ, ಮುಖ್ಯಸ್ಥರಾದ ಆರ್.ಎನ್. ಭಟ್ಟ ದುಂಡಿ,ತಿಳಿಸಿದ್ದಾರೆ

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Trending, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,363 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

 

Loading Comments...