ಶಿರಸಿ : ತಾಲೂಕಿನ ಕೆರೆಕೊಪ್ಪ ಗ್ರಾಮದ ಅರಣ್ಯ ಪ್ರದೇಶದಲ್ಲಿ ಆಮೆ ಹಿಡಿದು ಸಾಗಾಟ ಮಾಡುತ್ತಿದ್ದ ಈರ್ವರನ್ನು ಶಿರಸಿ ವಿಭಾಗದ ಅರಣ್ಯಾಧಿಕಾರಿಗಳು ಬಂಧಿಸಿದ ಘಟನೆ ನಡೆಸಿದೆ.
ತಾಲೂಕಿನ ಕಬ್ಬೆಯ ಅರ್ಲಹೊಂಡದ ಮಧುಕರ ನಾರಾಯಣ ನಾಯ್ಕೆ ಹಾಗೂ ರಮೇಶ್ ಮಾದೇವ ನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ. ಈ ಕಾರ್ಯಾ ಚರಣೆಯಲ್ಲಿ ಶಿರಸಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ, ಉಂಚಳ್ಳಿ ಉಪ ಅರಣ್ಯ ವಲಯಾಧಿಕಾರಿ ಸಂತೋಷ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ಗುಡ್ಡಪ್ಪ, ದಯಾನಂದ ಬೋರಕರ್, ಮಂಜುನಾಥ ದೇವಾಡಿಗ, ಗಂಗಾಧರ ಬಡಗಿ, ಹನುಮೇಸ್ ಭಾಗವಹಿಸಿದ್ದರು.

Leave a Comment