ಕುಮಟಾ : ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕೋಳಿ ಸಾಕಾಣಿಕ ಉಚಿತ ತರಬೇತಿ ನ.29 ರಿಂದ ಡಿ.8ರವರೆಗೆ ನಡೆಯಲಿದೆ.
ತರಬೇತಿಯು ಊಟ ಮತ್ತು ವಸತಿ ಸಹಿತ ಉಚಿತವಾಗಿರುತ್ತದೆ. ಅಭ್ಯರ್ಥಿಯು ನರುದ್ಯೋಗಿಯಾಗಿದ್ದು, ಸ್ವ-ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. 18 ರಿಂದ 45 ವರ್ಷ ವಯೋಮಿತಿಯವರು, ಕನ್ನಡ ಓದಲು. ಬರೆಯಲು ಬರುವ ಮತ್ತು ತರಬೇತಿಗೆ ಅನುಗುಣವಾಗಿ ಕನಿಷ್ಠ ಜ್ಞಾನವಿರುವವರು ಅರ್ಜಿ ಸಲ್ಲಿಸಬಹುದು.
ಆಸಕ್ತರು ನೇರವಾಗಿ ನಿದೇಶಕರು, ಕೆನರಾ ಬ್ಯಾಂಕ್, ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆ. ಕೈಗಾರಿಕಾ ವಸಾಹತು ಪ್ರದೇಶ, ಹೆಗಡೆ ರಸ್ತೆ, ಕುಮಟಾ -581 343, ಉತ್ತರ ಕನ್ನಡ ಜಿಲ್ಲೆ ವಿಳಸಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಲ್ಲದೇ ದೂರವಾಣಿ ಸಂಖ್ಯೆ 08386- 220 530 ಮೊ.ಸಂ: 94498 60007, 95382 81989, 99167 83825, 88804 44612, 96209 62004 ಕ್ಕೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಗ್ರಾಮೀಣ ಪ್ರಸೇಶದ ಬಿಪಿಎಲ್ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಆಸಕ್ತರು ತರಬೇತಿಗೆ ಬರುವಾಗ 4 ಪಾಸ್ ಪೋರ್ಟ್ ಸೈಜ್ ಪೋಟೋ, ರೇಶನ್ ಕಾರ್ಡ್, ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ಬುಕ್, ಪಾನ್ ಕಾರ್ಡ್ಗಳ 1 ಝೆರಾಕ್ಸ್ ಪ್ರತಿಯನ್ನು ತರಬೇಕು. ಈ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ಸ್ವ-ಉದ್ಯೋಗ ಕೈಗೊಳ್ಳಬೇಕೆಂದು ಕೋರಲಾಗಿದೆ.
Leave a Comment