
ಯಲ್ಲಾಪುರ: ಯಲ್ಲಾಪುರದಂತಯ ಸಣ್ಣ ಊರಿನಲ್ಲಿ ಕರ್ನಾಟಕ ತಂಡದ ಆಯ್ಕೆ ಪ್ರಕ್ರೀಯೆ ನಡೆಸುವಂತಹ ಮಟ್ಟದಲ್ಲಿ ಯಲ್ಲಾಪುರ ತಾಲುಕಿನ ಮಕ್ಕಳು ರೋಲರ್ ಸ್ಕೇಟಿಂಗ್ ನಲ್ಲಿ ಮುಂದುವರಿದಿರುವದು ಸಂತಸದ ವಿಷಯ ಎಂದು ಬಿರಣ್ಣಾ ನಾಯಕ ಮೊಗಟಾ ಹೇಳಿದರು.
ಅವರು ಯಲ್ಲಾಪುರದ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಕರ್ನಾಟಕ ರೊಲರ್ ಸ್ಕೆಟಿಂಗ್ ಅಸೊಶಿಯೇಶನ್ ಹಾಗು ಯಲ್ಲಾಪುರ ರೊಲರ್ ಸ್ಕೆಟಿಂಗ್ ಕ್ಲಬ್ ಅವರ ಸಂಯುಕ್ತ ಆಶ್ರಯದಲ್ಲಿ ನಡೆದ 37 ನೆ ರಾಜ್ಯ ರೊಲರ್ ಸ್ಕೆಟಿಂಗ್ ಹಾಕಿ ತಂಡದ ಆಯ್ಕೆ ಪ್ರಕ್ರಿಯೆ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವದರಿಂದ ಮಕ್ಕಳು ದೈಹಿಕವಾಗಿ ಸದೃಡ ವಾಗುತ್ತಾರೆ , ಇಗಿನ ಸ್ಪರ್ಧಾತ್ಮಕ ಕಾಲದಲ್ಲಿ ಕ್ರೀಡೆಯಲ್ಲಿ ಯಶಸ್ಸು ಸಿಕ್ಕರೆ ಜಿವನದಲ್ಲಿ ಬೇಕಾದಷ್ಟು ಹಣ ಗಳಿಸರುವ ಉದಾಹರಣೆ ನಮ್ಮ ಮುಂದೆ ಸಾಕಷ್ಟಿದೆ, ಗುರಿಯನ್ನಿಟ್ಟು ಮುನ್ನುಗ್ಗಿದರೆ ಯಶಸ್ಸು ಸಾದ್ಯ ಎಂದು ಬೀರಣ್ಣಾ ನಾಯಕ ಹೇಳಿದರು.
ಕರ್ನಾಟಕದ ರೊಲರ್ ಹಾಕಿ ಸ್ಕೆಟಿಂಗ್ ಅಸೊಶಿಯೇಶನ್ ಮುಖ್ಯ ತರಬೇತುದಾರ ದೀಲಿಪ್ ಹಣಬರ್ ಹಾಗು ಮೊಹನ್ ಕುಮಾರ್ ಟಿ ಎಚ್ ಸ್ಪರ್ಧಾಳುಗಳಿಗೆ ನಿಯಮಗಳನ್ನು ತಿಳಿಸಿದರು.
ದೂರದ ಬೆಂಗಳೂರು , ತುಮಕೂರು, ಕುಣಿಗಲ್ , ಸಂಕೇಶ್ವರ , ಬೇಳಗಾವ್ , ಶಿವಮೊಗ್ಗಾ , ದಾರವಾಡ , ಹುಬ್ಬಳ್ಳಿ , ಉತ್ತರ ಕನ್ನಡ , ಕೊಡಗು ಜಿಲ್ಲೆಯ ರೊಲರ್ ಸ್ಕೇಟಿಂಗ್ ಹಾಕಿಯಲ್ಲಿ ನುರಿತ ಕ್ರೀಡಾಪಟುಗಳು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಉದ್ಯಮಿ ಬಾಲಕ್ರಷ್ಣ ನಾಯಕ , ಯಲ್ಲಾಪುರ ರೊಲರ್ ಸ್ಕೇಟಿಂಗ್ ಕ್ಲಬ್ ನ ಅಧ್ಯಕ್ಷ ಪ್ರಕಾಶ ಶೇಟ್ , ವೇದಿಕೆಯಲ್ಲಿ ಉಪಸ್ಥಿತರಿದ್ದರು
Leave a Comment