ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ 2021-22ನೇ ಸಾಲಿನ ಬಿ.ಇಡಿ ಪ್ರವೇಶ ಪ್ರಕ್ರಿಯೆ ಶುರುವಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಹಾಗೂ ಆಡಳಿತ ಮಂಡಳಿಯ ಕೋಟಾ ಅಡಿ 100 ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶವಿದ್ದು, ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಬಿ.ಎ, ಬಿ.ಕಾಂ, ಬಿ.ಬಿಎ ಅಥವಾ ಬಿ.ಸಿ.ಎ ಪದವಿ ಪೂರೈಸಿರಬೇಕು. ಈ ವರ್ಷದಿಂದ ಬಿ.ಇ ಉತ್ತಿರ್ಣರಾದವರು ಸಹ ಪ್ರವೇಶ ಪಡೆಯಬಹುದಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ ಶೇ. 50ರಷ್ಟು ಅಂಕ ಪಡೆದಿರಬೇಕು. ಪರಿಶಿಷ್ಟ ಸಮುದಾಯ, ಪ್ರವರ್ಗ-1 ಹಾಗೂ ವಿಕಲಚೇತನ ಅಭ್ಯರ್ಥಿಗಳು ಕನಿಷ್ಠ ಶೇ. 45ರಷ್ಟು ಅಂಕ ಪಡೆದಿರಬೇಕು. ಕಂಪ್ಯುಟರ್ ಶಿಕ್ಷಣ, ಗೃಂಥಾಲಯ, ಮನೋ ವಿಜ್ಞಾನ ಪ್ರಯೋಗಾಲಯ, ಮಧ್ಯಾಹ್ನ ಊಟದ ವ್ಯವಸ್ಥೆ, ಶಾಲಾ ವಾಹನ, ಸುಸಜ್ಜಿತ ಕಟ್ಟಡ, ಅನುಭವಿ ಶಿಕ್ಷಕ ವರ್ಗವನ್ನು ಸಂಸ್ಥೆ ಒಳಗೊಂಡಿದೆ. ಆಯ್ಕೆಯಾದ ಅಭ್ಯರ್ಥಿಗಳಿಂದ ಸರ್ಕಾರ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಡೆಯಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಂಪರ್ಕ ಸಂಖ್ಯೆ: 7337875279ಅನ್ನು ಸಂಪರ್ಕಿಸುವಂತೆ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯದ ಪ್ರಕಟನೆ ಯಲ್ಲಿ ತಿಳಿಸಿ ದ್ದಾರೆ
Leave a Comment