ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸ್ಥಳೀಯ ಕಲಾವಿದರಿಂದ ಪ್ರದರ್ಶನಗೊಂಡ ಮೀನಾಕ್ಷಿ ಕಲ್ಯಾಣ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಗಣಪತಿ ಭಾಗ್ವತ ಕವಾಳೆ, ಅನಂತ ಹೆಗಡೆ ದಂತಳಿಗೆ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ನಾಗಪ್ಪ ಕೋಮಾರ, ಚಂಡೆವಾದಕರಾಗಿ ಮಹಾಬಲೇಶ್ವರ ನಾಯ್ಕನಕೆರೆ, ಪ್ರಶಾಂತ ಹೆಗಡೆ ಕೈಗಡಿ, ಮಂಜುನಾಥ ಭಾಗ್ವತ ಕವಾಳೆ ಭಾಗವಹಿಸಿದ್ದರು. ಈಶ್ವರನಾಗಿ ಗಣಪತಿ ಭಾಗ್ವತ ಶಿಂಬಳಗಾರ, ಶೂರಸೇನನಾಗಿ ಗಣಪತಿ ಭಟ್ಟ ಕವಡಿಕೆರೆ, ಮೀನಾಕ್ಷಿಯಾಗಿ ನಾಗರಾಜ ಭಟ್ಟ ಕುಂಕಿಪಾಲ, ಪದ್ಮಗಂಧಿಯಾಗಿ ವೆಂಕಟ್ರಮಣ ಭಾಗ್ವತ ಕವಾಳೆ, ಮಂತ್ರಿ ಹಾಗೂ ನಂದಿಯಾಗಿ ದೀಪಕ ಭಟ್ಟ ಕುಂಕಿ, ನಾರದನಾಗಿ ಶ್ರೀಧರ ಅಣಲಗಾರ ಪಾತ್ರನಿರ್ವಹಿಸಿದರು
Leave a Comment