
ಯಲ್ಲಾಪುರ : ರೈತ ಮಹಿಳೆಯರು ಉತ್ಪಾದಿಸುವ ಕೃಷಿ ಉತ್ಪನ್ನಗಳ ಉತ್ಪಾದಕರ ಗುಂಪು ರಚನೆ ಮೌಲ್ಯವರ್ಧನೆ ಹಾಗೂ ಮೌಲ್ಯ ಸರಪಳಿ, ಕುರಿತು ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮ ನವಚೇತನ ಸಮುದಾಯ ನಿರ್ವಹಣಾ ತರಬೇತಿ ಕೇಂದ್ರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯ ತಪೋವನದಲ್ಲಿ ಸಂಪನ್ನಗೊAಡಿತು.

ಈ ಸಂದರ್ಭದಲ್ಲಿ ತಾಲೂಕಾ ಪಂಚಾಯತ ಇಒ ಜಗದೀಶ ಕಮ್ಮಾರ ಮಾತನಾಡಿ ರೈತರು ಬೆಳೆದ ಬೆಳೆಗೆ ಸರಿಯಾದ ಧಾರಣೆ ಸಿಗಬೇಕಾದರ ಸ್ಥಳೀಯ ರೈತ ಮಹಿಳಾ ಸ್ವಸಹಾಯ ಸಂಘಗಳು ಬಲಿಷ್ಠವಾಗಿ ರೈತರ ಬೆಳೆಯನ್ನು ಸಂಸ್ಕರಣೆ ಮಾಡಿ ಮಾರುಕಟ್ಟೆಗೆ ತಲಪುವಂತೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ನಾಲ್ಕು ದಿನದ ತರಬೇತಿ ಪೂರಕವಾಗಿದೆ ಎಂದರು.
ರಾಜ್ಯ ಕಾರ್ಯಕ್ರಮ ವ್ಯವಸ್ಥಾಪಕಿ ರಾಜೇಶ್ವರಿ ಹಾಗೂ ನವಚೇತನ ಅಧ್ಯಕ್ಷೆ ಚಂದಗುಳಿ ಯ ಶ್ವೇತಾ ಭಟ್ , ಜಿಪಂ ಜಿಲ್ಲಾ ವ್ಯವಸ್ಥಾಪಕ ನಾಗರಾಜ್ ಎಸ್ ಕಲ್ಮನೆ ಯೋಜನೆ ಕಾರ್ಯಕ್ರಮಗಳ ಅನುಷ್ಠಾನ ಮತ್ತು ತರಬೇತಿ ವಿಷಯ ದ ಕುರಿತು ಮಾಹಿತಿಯನ್ನು ನೀಡಿದರು . ಜಿಲ್ಲಾ ವ್ಯವಸ್ಥಾಪಕ ಪುಂಡಲೀಕ ಸಿರ್ಸಿಕರ್ ಹಾಗೂ ಜಿಲ್ಲಾ ತಾಂತ್ರಿಕ ತಜ್ಞ ಭಾಸ್ಕರ್, ತಾಪಂ ಸಿಬ್ಬಂದಿಗಳು ಮುಂತಾÀದವರು ಇದ್ದರು.
Leave a Comment