ಯಲ್ಲಾಪುರ : ಯಕ್ಷಗಾನ ಕಲಾವಿದರ ವೇಷದಲ್ಲಿಯೇ ಮಸಾಲೆ ದೋಸೆ ಸಪ್ಲೆöÊ ಮಾಡುತ್ತಿರುವ ಪೋಟೋ ಹಾಗೂ ವಿಡಿಯೋ ಕಳೆದ ಒಂದು ವಾರದಿಂದ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಯಕ್ಷಗಾನ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದು ಪರ/ವಿರೋಧ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಸಂಬAಧಿಸಿದAತೆ ಫೋಟೋದಲ್ಲಿದ್ದ ಕಲಾವಿದರಾದ ಭಾಸ್ಕರ ಗಾವಂಕರ ಬಿದ್ರೇಮನೆ ಹಾಗೂ ಸದಾಶಿವ ಭಟ್ಟ ಮಲವಳ್ಳಿ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಈ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, ಈ ಘಟನೆ ಪೂರ್ವನಿಯೋಜಿತ ಅಲ್ಲ. ಆಕಸ್ಮಿಕವಾಗಿ ನಮ್ಮ ಅರಿವಿಗೆ ಬಾರದೇ ಆದ ನಮ್ಮಿಂದ ಹಾಗೂ ಹೊಟೇಲ್‌ಮಾಲಿಕರಿಂದಾದ À ಅಚಾತುರ್ಯವೂ ಹೌದು. ಆದ ಕಾರಣ ಯಕ್ಷ ಪ್ರೇಮಿಗಳಲ್ಲಿ ಕ್ಷಮೆ ಕೇಳಿ ಈ ಬಗ್ಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ.
ಎಂದರಲ್ಲದೇ ಕೆಲ ಯಕ್ಷಗಾನ ಕಲಾವಿದರಿಗೆ ಮಾತ್ರ ಆಕ್ಷೇಪ ,ನಿಂದನೆ ಸೀಮಿತವಾಗಿರದೇ ಈಗಲೂ ಸಹ ಅನೇಕ ರೀತಿಯಲ್ಲಿ ಜಾಹೀರಾತು,ಚಲನಚಿತ್ರಗಳಲ್ಲಿ ಯಕ್ಷಗಾನದ ಅಪಸವ್ಯವಾಗುತ್ತಿದೆ ಹೀಗೆ ಯಕ್ಷಗಾನ ಕಲೆಗೆ ಅಪಪ್ರಚಾರವಾದರೆ ವಿಷಯಾಧರಿತವಾಗಿ ಖಂಡಿಸುವAತಾಗಲಿ
. ಅದರ ಕುರಿತು ಧನಾತ್ಮಕವಾಗಿ ಚರ್ಚೆಗಳು ನಡೆದು ಸುಧಾರಣೆಗಳು ನಡೆದರೆ ಒಳ್ಳೆಯದು. ಆದರೆ ಅದನ್ನೇ ಅಸ್ತ್ರವಾಗಿಸಿ ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಮಂಜಸವಲ್ಲ. ಇದೇ ಒಂದು ಸಂದರ್ಭದಲ್ಲಿ ನಾವುಗಳು ಕೇಳಿಕೊಳ್ಳ ಬಯಸುವುದೇನೆಂದರೆ, ಇನ್ನು ಮುಂದೆ ತಮ್ಮೆಲ್ಲರ ಸಹಕಾರದಿಂದ ಯಕ್ಷಗಾನಕ್ಕೆ ಒಂದು ನಿಯಂತ್ರಣ ಮಂಡಳಿ ಸ್ಥಾಪನೆಯಾಗಲಿ, ಇಂದು ನಮ್ಮಿಂದಾದAತಹ ಅಚಾತುರ್ಯಕ್ಕೆ ಇನ್ನು ಮುಂದೆ ಯಕ್ಷಗಾನದಲ್ಲಿ ಯಾರೇ? ಏನೇ? ತಪ್ಪುಗಳನ್ನು ಮಾಡಿದರೂ ಬೇಧ ಬಾವ ಇಲ್ಲದೇ, ಒಂದು ನಿರ್ದಿಷ್ಟವಾದಂತಹ ಚೌಕಟ್ಟನ್ನು ನಿರ್ಮಿಸಿ, ನಿರ್ಣಯಿಸುವ ನಿಯಂತ್ರಿಕ ಪ್ರಾಧಿಕಾರ ಸಿದ್ಧವಾಗಲಿ, ಈ ಬಗ್ಗೆ ಯಕ್ಷಗಾನ ಅಕಾಡೆಮಿ ಮತ್ತು ಯಕ್ಷ ಪ್ರಾಜ್ಯರ ಗುಂಪು ಗಮನಹರಿಸಲಿ ಎಂದು ಕೇಳಿಕೊಳ್ಳುತ್ತೇವೆ ಎಂದರು.
ಘಟನೆ ವಿವರ :ಯಕ್ಷಗಾನ ನೃತ್ಯ ಪ್ರದರ್ಶನ, ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಅದೇ ವೇಳೆ ಕಾರ್ಯಕ್ರಮ ಆಯೋಜಕರ ಹೋಟೆಲ್ ಉದ್ಘಾಟನೆಯೂ ಇದ್ದು, ಅವರು ಗೌರವಪೂರ್ವಕವಾಗಿ ಮಸಾಲೆ ದೋಸೆಯನ್ನು ನಮ್ಮಿಂದ ಅತಿಥಿಗಳಿಗೆ ನೀಡಿಸುವ ಮೂಲಕ ಹೋಟೆಲ್ ಉದ್ಘಾಟನೆಯಾಗಲಿ ಎಂಬ ಉದ್ದೇಶದಿಂದ ಇದನ್ನು ಮಾಡಿಸಿದ್ದಾರೆ. ಕಲೆ, ಕಲಾವಿದರನ್ನು ಗೌರವದಿಂದಲೇ ಕಂಡಿದ್ದಾರೆ. ಆದರೆ ಕೇವಲ ವೈರಲ್ ಆದ ವಿಡಿಯೊ ನೋಡಿ, ಪೂರ್ವಾಪರ ವಿಚಾರಿಸದೇ ಅನಗತ್ಯವಾಗಿ ಕೆಲವರು ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿದ್ದಾರೆ. ವಿಷಯ ಅರಿಯದೇ ಈ ರೀತಿ ತೇಜೋವಧೆಗೆ ಮುಂದಾಗಿರುವುದು ಸರಿಯಲ್ಲ ಎಂದರು.
Leave a Comment