ಯಲ್ಲಾಪುರ: ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಂದ ವಿಧಾನ ಪರಿಷತ್ಗೆ ಸದಸ್ಯರನ್ನು ಆಯ್ಕೆ ಮಾಡಲು ನಾಳೆ ನಡೆಯಲಿರುವ ಚುನಾವಣೆಗಾಗಿ ತಾಲೂಕಿನಲ್ಲಿ ಸಕಲ ಸಿದ್ಧತೆಗಳಾಗಿವೆ ಎಂದು ತಹಶೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಗುರುವಾರ ಮಾಹಿತಿ ನೀಡಿದ ಅವರು, ತಾಲ್ಲೂಕಿನಲ್ಲಿ 15 ಗ್ರಾಮ ಪಂಚಾಯ್ತಿ ಹಾಗೂ 1 ಪಟ್ಟಣ ಪಂಚಾಯ್ತಿ ಸೇರಿದಂತೆ ಒಟ್ಟೂ 16 ಮತಗಟ್ಟೆ ಗಳಿದ್ದು, 87 ಹೆಣ್ಣು ಮತ್ತು 91 ಗಂಡು ಸೇರಿದಂತೆ ಒಟ್ಟೂ 178 ಮತದಾರರಿ ದ್ದಾರೆ. ತಾಲ್ಲೂಕು ಕಚೇರಿಯಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರಗಳನ್ನು ಆರಂಭಿಸಲಾಗಿದೆ.
ತಾಲೂಕಿನ 16 ಮತಗಟ್ಟೆಗಳಿಗೆ 2 ಸೆಕ್ಟರ್ ಅಧಿಕಾರಿ, 1 ಪ್ರೈಯಿಂಗ್ ಸ್ಮಾಡ್ ಅಧಿಕಾರಿ ಮತ್ತು ಒಬ್ಬ ವಿಎಸ್ಟಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯ ವರೆಗೆ ಮಾತ್ರ ಮತದಾನ ನಡೆಯಲಿದ್ದು, 150 ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ಸಹಕಾರ ನೀಡಲಿದ್ದಾರೆ. ಕಿರವತ್ತಿಯಲ್ಲಿ ತಪಾಸಣಾ ಕೇಂದ್ರ ಗಳನ್ನು ಆರಂಭಿಸಲಾಗಿದೆ.
ಪ್ರತಿ ಮತ ಗಟ್ಟೆಗೆ 2 ಮತಗಟ್ಟೆ ಅಧಿಕಾರಿ, ಒಬ್ಬ ಸೂಕ್ಷ್ಮ ವೀಕ್ಷಕ, ಓರ್ವ ಛಾಯಾಗ್ರಾಹಕ ರನ್ನು ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ನಂತರ ಚುನಾವಣೆ ಪರಿಕರ ಗಳನ್ನು ಮತಗಟ್ಟೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಚುನಾವಣೆಗೆ ನಿಯೋಜಿತ ಅಧಿಕಾರಿಗಳಿಗೆ ಕೊನೆಯ ಕ್ಷಣದ ಮಾಹಿತಿಗಳನ್ನು ನೀಡಲಾಯಿತು. ಅಧಿಕಾರಿಗಳು ಸಂಜೆ ನಿಗದಿಪಡಿಸಿದ ವಾಹನಗಳ ಮೂಲಕ ತಮ್ಮ ತಮ್ಮ ಮತಕೇಂದ್ರಗಳಿಗೆ ತೆರಳಿದರು.
Leave a Comment