
ಯಲ್ಲಾಪುರ: ಸ್ಥಳೀಯ ಸಂಸ್ಥೆಗಳ ಚುನಾಯಿತ ಮತಕ್ಷೇತ್ರದ ವಿಧಾನಪರಿಷತ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಪಕ್ಷದ ಕಾರ್ಯಾಲಯದಿಂದ ಪಟ್ಟಣ ಪಂಚಾಯತ ಸದಸ್ಯರೊಂದಿಗೆಕಾಲು ನಡಿಗೆಯಲ್ಲಿ ತೆರಳಿ, ಪಟ್ಟಣ ಪಂಚಾಯತ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ನಂತರ ಮತನಾಡಿದ ಸಚಿವರು, ನಮ್ಮ ಅಭ್ಯರ್ಥಿ ಗಣಪತಿ ಉಳ್ವೇಕರ್ ಅವರು ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಜಯಗಳಿಸುವುದರ ಮೂಲಕವಾಗಿ ಉತ್ತರಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಹೊಸ ಮೈಲಿಗಳನ್ನು ಸೃಷ್ಟಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ್, ಉಪಾಧ್ಯಕ್ಷರಾದ ಶಾಮಲಿ ಪಾಟನಕರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಮಿತ್ ಅಂಗಡಿ, ಪ್ರಮುಖರಾದ ವಿಜಯ ಮಿರಾಶಿ, ಮಂಡಲ ಉಪಾಧ್ಯಕ್ಷರಾದ ಶಿರಿಷ್ ಪ್ರಭು ಹಾಗೂ ಪಟ್ಟಣ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
Leave a Comment