ಯಲ್ಲಾಪುರ : ರಾಜ್ಯದ ಜಾಣರ ಚಾವಡಿ ಎಂದೇ ಕ ರಿಯಲ್ಪಡುವ ವಿಧಾನ ಪರಿಷತ್ಗೆ ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆಯಿತು.ಇದೀಗ ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.

ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತ ಗಳಲ್ಲಿ ಶೇ.100ರಷ್ಟು ಮತದಾನ ಮೂಲಕ ಅತಿ ಹೆಚ್ಚು ಮತದಾನವಾಗಿದ್ದರೆ, ಯಲ್ಲಾಪುರ ಪಟ್ಟಣ ಪಂಚಾಯತ ನಲ್ಲಿ 90ರಷ್ಟು ಮತದಾನ ನಡೆಯುವ ಮೂಲಕ ಕೊನೆಯ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ಶೇ 98.88 ರಷ್ಟು ಮತದಾನ ವಾಗಿದೆ.

ತಾಲೂಕಿನಲ್ಲಿ ಚಲಾಯಿಸಿದ ಮತಗಳ ವಿವರ
ಗ್ರಾ.ಪಂ. ಕಣ್ಣೀಗೇರಿ ಒಟ್ಟೂ ೧೧, ಗ್ರಾ.ಪಂ. ಆನಗೋಡ ೮, ಗ್ರಾ.ಪಂ. ದೇಹಳ್ಳಿ ೬, ಗ್ರಾ.ಪಂ. ವಜ್ರಳ್ಳಿ ೯, ಗ್ರಾ.ಪಂ. ಮಾವಿನಮನೆ ೯, ಗ್ರಾ.ಪಂ. ಇಡಗುಂದಿ ೧೩, ಗ್ರಾ.ಪಂ. ಕಿರವತ್ತಿ ೨೪, ಗ್ರಾ.ಪಂ. ಮಾದನೂರು (ಹುಣಶೆಟ್ಟಿಕೊಪ್ಪ) ೧೩, ಗ್ರಾ.ಪಂ. ನಂದೊಳ್ಳಿ ೭, ಗ್ರಾ.ಪಂ. ಚಂದಗುಳಿ (ಉಪ್ಪಳೇಶ್ವರ್) ೧೧, ಗ್ರಾ.ಪಂ. ಕಂಪ್ಲಿ (ಮಂಚಿಕೇರಿ) ೮, ಗ್ರಾ.ಪಂ. ಹಾಸಣಗಿ ೧೦, ಗ್ರಾ.ಪಂ. ಕುಂದರಗಿ ೧೩, ಗ್ರಾ.ಪಂ. ಶಿಗೆಮನೆ ಉಮ್ಮಚಗಿ ೧೦, ಗ್ರಾ.ಪಂ. ಹಿತ್ಲಳ್ಳಿ ೬ ಮತಗಳು ಸಂಪೂರ್ಣವಾಗಿ ಚಲಾವಣೆಗೊಂಡು ಶೇ.೧೦೦ ಮತದಾನವಾಗಿದೆ. ಆದರೆ ಪಟ್ಟಣ ಪಂಚಾಯತ ಯಲ್ಲಾಪುರದಲ್ಲಿ ೨೦ ಮತಗಳ ಪೈಕಿ ೧೮ ಮತಗಳು ಚಲಾವಣೆಗೊಂಡು ಶೇ.೯೦ ರಷ್ಟು ಮತದಾನವಾಯಿತು. ಪಟ್ಟಣ ಪಂಚಾಯತದಲ್ಲಿ ಓರ್ವ ಪುರುಷ ಹಾಗೂ ಓರ್ವ ಮಹಿಳೆಯ ಮತಗಳು ಚಲಾವಣೆಗೊಂಡಿಲ್ಲ. ಶಾಂತಿಯುತವಾಗಿ ಸಂಜೆ ೪ ಗಂಟೆಗೆ ಮತದಾನ ಪ್ರಕ್ರಿಯೆ ಸಂಪನ್ನಗೊAಡಿತು. ಪಟ್ಟಣ ಪಂಚಾಯತ್ ಮತಗಟ್ಟೆ ಯಲ್ಲಿ, ಅರವಿಂದ್ ಪೂಜಾರ್, ದತ್ತಾತ್ರೇಯ ತಾಪಸ್, ಮೇಘಪ್ಪ ಲಮಾಣಿ, ಅಮರ ,ಚುನಾವಣೆ ಪ್ರಕ್ರಿಯೆ ನಡೆಸಿದರು. ಎಜೇಂಟರಾಗಿ ಕೃಷ್ಣ ಹರಿಜನ್, ಸರಸ್ವತಿ ಗುನಗಾ,ಇದ್ದರು
ಆರೋಗ್ಯ ಅಧಿಕಾರಿಗಳು ,ಪೋಲಿಸ್ ಇಲಾಖೆಯವರು ಮತಗಟ್ಟೆಗಳ ಬಳಿ ನಿಗಾ ವಹಿಸಿ ಸಂಪೂರ್ಣ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು.
Leave a Comment