
ಯಲ್ಲಾಪುರ : ಪಟ್ಟಣದ ಗಾಂಧಿ ಚೌಕದ ಬಳಿಯ ನಕ್ಷತ್ರ ಮೊಬೈಲ್ ಹಾಗೂ ಜನತಾ ಕೋಲ್ಡ್ರಿಂಕ್ಸ್ ಅಂಗಡಿ ಧ್ವಂಸ ಹಾಗೂ ಅದರ ಮಾಲಿಕರ ಮೇಲಾದ ಹಲ್ಲೆ ಮತ್ತು ಜೀವಬೆದರಿಕೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಯಲ್ಲಾಪುರ ಪೋಲಿಸರು ಬಂಧಿಸಿದ ಘಟನೆ ನಡೆದಿದೆ.
ಉದಯ ಕಲ್ಲೋಳಪ್ಪಾ ಮಂಡಗೊಡ್ಲಿ(38), ಗಣೇಶ ಕಲ್ಲೋಳಪ್ಪ ಮಂಡಗೊಡ್ಲಿ (33), ಭರತ ಕಲ್ಲೋಳಪ್ಪ ಮಂಡಗೊಡ್ಲಿ (32) ಬಂಧಿತ ಆರೋಪಿಗಳಾಗಿದ್ದು, ಸೋಮವಾರ ಬೆಳಗ್ಗಿನ ಜಾವ 4.10 ರ ಸುಮಾರಿಗೆ ಅಂಗಡಿಗೆ ಅಕ್ರಮವಾಗಿ ಪ್ರವೇಶ ಮಾಡಿ ಅಂಗಡಿ ಮಾಲಿಕರಾದ ಚಂದ್ರಶೇಖರ ಬಾಬು ನಾಯ್ಕ ಹಾಗೂ ಕೆಲಸದವನಾದ ಗಜಾನನ ನಾರಾಯಣ ಪಡ್ತಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಕತ್ತು ಹಿಸುಕಿ ಕೊಲೆ ಪ್ರಯತ್ನಿಸಿ, ಬೆದರಿಕೆ ಹಾಕಿದ್ದಲ್ಲದೆ.

ಲಾರಿಗೆ ಹಗ್ಗ ಕಟ್ಟಿ ಅಂಗಡಿಯ ಜಂತಿಗೆಯನ್ನು ಎಳೆದು ಅಂಗಡಿ ಬೀಳಿಸಿ ಅಂಗಡಿಯಲ್ಲಿದ್ದ 7-8 ಲಕ್ಷ ಮೌಲ್ಯದ ಸಾಮಾನುಗಳನ್ನು ಜಖಂ ಗೊಳಿಸಿರುತ್ತಾರೆ ಎಂದು ಪ್ರಕರಣ ದಾಖಲಾಗಿತ್ತು.
ಪಿ.ಎಸ್.ಐ. ಪ್ರಿಯಾಂಕಾ ನ್ಯಾಮಗೌಡ ಈ ಕುರಿತು ತನಿಖೆ ನಡೆಸಿ, ನೀಡಿರುವ ದೂರಿನನ್ವಯ ಆರೋಪಿಗಳನ್ನು ಬಂಧಿಸಿರುತ್ತಾರೆ.
Leave a Comment