ಯಲ್ಲಾಪುರ: ಪಪಂ ಸದಸ್ಯ ಸೋಮೇಶ್ವರ ನಾಯ್ಕ ಮತ್ತು ಆರೋಗ್ಯ ನಿರೀಕ್ಷಕ ಗುರು ಗಡಗಿ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ, ಕ್ಯಾಂಟೀನ್ ನಿರ್ವಹಣೆ ಗುತ್ತಿಗೆ ಪಡೆದವರಿಗೆ ಆಹಾರದ ಗುಣಮಟ್ಟ ಕಾಯ್ದುಕೊಂಡು, ಸಮಯಕ್ಕೆ ಸರಿಯಾಗಿ ಆಹಾರ ಒದಗಿಸುವಂತೆ ತಾಕೀತು ಮಾಡಿರುವ ಘಟನೆ ನಡೆದಿದೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದವರು ಕಳೆದ ಪಪಂ ಸಾಮಾನ್ಯ ಸಭೆಗೆ ಆಗಮಿಸಿ ತಮಗೆ ಮೂರು ತಿಂಗಳಿಂದ ಕ್ಯಾಂಟೀನ್ ನಿರ್ವಾಹಕರು ಸಂಬಳ ನೀಡಿಲ್ಲ. ಎಂದು ದೂರಿದ್ದರು . ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರು ಹಾಗೂ ಅಽಕಾರಿಗಳು ಕೂಲಿ ಕಾರ್ಮಿಕರಿಗೆ ಕೂಡಲೇ ಸಂಬಳ ಒದಗಿಸುವಂತೆ ಕ್ಯಾಂಟೀನ್ ನಿರ್ವಹಣೆ ತೆಗೆದುಕೊಂಡ ಗುತ್ತಿಗೆದಾರರಿಗೆ ತಿಳಿಸುವುದಾಗಿ ಭರವಸೆ
ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದಾಗ
ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಇದುವರೆಗೂ ಸಂಬಳ ನೀಡಿಲ್ಲ ಎಂದು ಮಾಹಿತಿ ಅವರಿಗೆ ಲಭ್ಯವಾಗಿದೆ. ಜೊತೆಗೆ ಕಳಪೆ ದರ್ಜೆಯ ಅಕ್ಕಿಯಿಂದ ಮಾಡಿದ ಅನ್ನದಿಂದ ಊಟ ನೀಡಲಾಗುತ್ತಿದೆ ಎನ್ನುವುದು ಭೇಟಿ ನೀಡಿದವರಿಗೆ ಕಂಡುಬಂದಿದೆ. ಮಧ್ಯಾಹ್ನ 12:30 ಕ್ಕೆ ಪ್ರಾರಂಭವಾಗಬೇಕಿದ್ದ ಊಟ ಒಂದು ಗಂಟೆಯವರೆಗೂ ಪ್ರಾರಂಭವಾಗದ ಬಗ್ಗೆ ಸೋಮೇಶ್ವರ ನಾಯ್ಕ ಆಕ್ಷೇಪ ವ್ಯಕ್ತಪಡಿಸಿ ಹೀಗೆ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅಧಿಕಾರಿಗಳ, ಸಚಿವರ ಗಮನಕ್ಕೆ ತಂದು ಕ್ರಮ ಕೈಕೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ .ಸ್ಥಳೀಯರಾದ ಮಂಜುನಾಥ ಹೆಗಡೆ, ನರೇಂದ್ರ ನಾಯ್ಕ ಮುಂತಾದವರು ಇದ್ದರು.
Leave a Comment