
ಯಲ್ಲಾಪುರ :ದೇಶದ ರಕ್ಷಣೆಯ ಕಾರ್ಯವು ಪುಣ್ಯದ ಕೆಲಸವಾಗಿದೆ. ನಾವು ದೇಶದಲ್ಲಿ ಸುರಕ್ಷಿತವಾಗಿರಲು ಗಡಿಕಾಯುವ ಸೈನಿಕರು ಕಾರಣರಾಗಿದ್ದಾರೆ. ಹೆಲಿ ಕ್ಯಾಪ್ಟರ್ ದುರಂತದಲ್ಲಿ ಮಡಿದ ಜನರಲ್ ಬಿಪಿನ್ ರಾವತ್ ರವರು ರಕ್ಷಣಾ ಸೇನಾ ಪಡೆಯ ಚಾಣಾಕ್ಷ ದಳಪತಿಯಾಗಿ ಉಗ್ರರಿಗೆ ಸಿಂಹಸಪ್ನರಾಗಿದ್ದರು. ಎಂದು ಸಾಹಿತಿ ವನರಾಗ ಶರ್ಮ ಹೇಳಿದರು .
ಅವರು ವಜ್ರಳ್ಳಿಯಲ್ಲಿ ಜರುಗಿದ ಹುತಾತ್ಮ ಯೋಧರಿಗೆ ನಮನ ಶೃದ್ಧಾಂಜಲಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿ ದೇಶದ್ರೋಹಿಗಳಿಗೆ ತಕ್ಕ ಪಾಠ ಕಲಿಸಲು, ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ರಾವತ್ ರ ಕೊಡುಗೆ ಅನನ್ಯವಾದದ್ದು. ನಾವು ದೇಶಪ್ರೇಮಿಯಾಗಿ ಇವರ ಆದರ್ಶ ವನ್ನು ಯುವ ಪೀಳಿಗೆಗೆ ಪರಿಚಯಿಸಿ ದೇಶಭಕ್ತಿ ಮೆರೆಯಬೇಕಿದೆ. ವೀರ ಯೋಧ ರಾವತ್ ,ಅವರ ಸೇವೆ ಸ್ಮರಣೀಯವಾದದ್ದು. ಎಂದರು. ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ
ಉಮೇಶ ಭಾಗ್ವತ, ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ನಾಗೇಂದ್ರ ಹೆಗಡೆ ಕೋಣೆಮನೆ, ನಿರ್ದೇಶಕರಾದ ಟಿ.ಎನ್. ಭಟ್ಟ , ನಾಗೇಂದ್ರ ನಡಿಗೆಮನೆ, ವಿಘ್ನೇಶ್ವರ ಹೆಗಡೆ, ದತ್ತಾತ್ರೇಯ ಭಟ್ಟ ತಾರಗಾರ,ವಜ್ರಳ್ಳಿಯ ಗೆಳೆಯರ ಬಳಗದ ಸದಸ್ಯರು ಉಪಸ್ಥಿತಿತರಿದ್ದರು. ಶೃದ್ಧಾಂಜಲಿ ಸಭೆಯ ಸಂಘಟಕ ವಿ ಎನ್ ಭಟ್ಟ ನಡಿಗೆಮನೆ ಸ್ವಾಗತಿಸಿದರು.ಆದರ್ಶ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕ ಜಿ.ವಿ.ಭಟ್ಟ ಅಡ್ಕೆಮನೆ ಸಭೆ ನಿರ್ವಹಿಸಿ ವಂದಿಸಿದರು. ನಂತರ ಸಾರ್ವಜನಿಕ ರು ಸೇರಿ ಮೊಂಬತ್ತಿ ಬೆಳಗಿ ನಮನ ಸಲ್ಲಿಸಿದರು
Leave a Comment