
[ ಯಲ್ಲಾಪುರ :ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಕೋಳಿಕೇರಿ ಗ್ರಾಮದ ಬಳಿ ಕಲಘಟಗಿ ಕಡೆಯಿಂದ ಭಟ್ಕಳ ಕಡೆಗೆ ಕೋಳಿ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಕಲಘಟಗಿ ಕಡೆಯಿಂದ ಭಟ್ಕಳ ಕಡೆಗೆ ಮಾಂಸದ ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿ ಉರುಳಿಬಿದ್ದಿದೆ.ಕೊಳಿಕೇರಿ ಸಮೀಪವೇ ಅಪಘಾತ ಸಂಭವಿಸಿದ್ದು, ಗ್ರಾಮದ ಕೆಲವು ಜನ ಸೇರಿದಂತೆ, ಅಕ್ಕಪಕ್ಕದ ಇನ್ನಿತರ ಗ್ರಾಮದ ಜನ ಬಿದ್ದಿರುವ ಜೀವಂತ ಕೋಳಿಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ಅಪಘಾತದಲ್ಲಿ ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಗೆ ಯಾವುದೇ ರೀತಿಯ ಗಂಭೀರ ಸ್ವರೂಪದ ಗಾಯಗಳಾಗಿಲ್ಲ. ಆದರೆ, ಲಕ್ಷಾಂತರ ಬೆಲೆ ಬಾಳುವ ನೂರಾರು ಕೋಳಿಗಳು ಮೃತಪಟ್ಟಿವೆ.
Leave a Comment