
ಯಲ್ಲಾಪುರ: ಪಟ್ಟಣದ ತಾಪಂ ಆವಾರದಲ್ಲಿ ಸಂಜೀವಿನಿ ಒಕ್ಕೂಟಗಳ ಸಂಜೀವಿನಿ ಮಾಸಿಕ ಸಂತೆ, ಗೃಹೋತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನ ಮೇಳಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು. ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೌಶಲ್ಯಾಭಿವೃದ್ಧಿ ಮತ್ತು ಜೀವ ನೋಪಾಯ ಇಲಾಖೆ, ಜಿಪಂ ಉತ್ತರಕನ್ನಡ,ತಾಪಂ ಯಲ್ಲಾಪುರ ಇವುಗಳ ಆಶ್ರಯದಲ್ಲಿ ಕಾಠ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಮೇಳದಲ್ಲಿ ಸ್ವಸಹಾಯ ಸಂಘದ ಸದಸ್ಯೆಯರು ತಯಾರಿಸಿದ ವಿವಿಧ ಗೃಹೋತ್ಪನ್ನಗಳ ಮಾರಾಟ ಭರದಿಂದ ನಡೆಯಿತು. ಸ್ವಸಹಾಯ ಸಂಘದ ವತಿಯಿಂದ ತಯಾರಿಸಲಾದ ಉಪ್ಪಿನ ಕಾಯಿ, ಹಪ್ಪಳ, ಸಂಡಿಗೆ, ಚಿಪ್ ಹೂವಿನಹಾರ, ಫಿನೈಲ್, ಆಹಾರ ಪದಾರ್ಥಗಳು, ಸಿಹಿ ತಿನಿಸುಗಳು, ಖಾರದ ಪುಡಿ, ಸಾಂಬಾರ್ ಪುಡಿ, ಅರಿಶಿನ ಹುಡಿ, ಹೋಳಿಗೆ, ಲಡ್ಡು, ಶಂಕರಪೊಳೆ,ಚಕ್ಕುಲಿ ಹಾಗೂ ವಿವಿಧ ತರಕಾರಿಗಳ ಮಾರಾಟ ಏರ್ಪಡಿಸ ಲಾಗಿತ್ತು. ಈ ಮೇಳಕ್ಕೆ ಸಾರ್ವಜನಿ ಕರಿಂದ ಉತ್ತಮ ಸ್ಪಂದನೆ ದೊರೆಯಿತು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಪ ಟ್ಟಣ ಪಂಚಾಯ್ತಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್ .ವಿಜಯ ಮಿರಾಶಿ,ಇಡಗುಂದಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗವೇಣಿ ಸಿದ್ಧಿ, ಸ್ತ್ರೀ ಶಕ್ತಿ ಸಂಘದ ವಿಜಯ ಲಕ್ಷ್ಮಿ, ಮುಂತಾದವರು ವೇದಿಕೆಯಲ್ಲಿದ್ದರು. ತಾಲೂಕು ಪಂಚಾಯ್ತಿ ಇಒ ಜಗದೀಶ ಕಮ್ಮಾರ ಸ್ವಾಗತಿಸಿ, ನಿರೂಪಿಸಿದರು. ಸಂಜಿವಿನಿ ಒಕ್ಕೂಟದ ರಾಜಾರಾಮ ವೈದ್ಯ ವಂದಿಸಿದರು.
Leave a Comment