ಆರ್ಥಿಕ ಶಕ್ತಿ, ವೈಧ್ಯಕೀಯ ವ್ಯವಸ್ಥೆ, ಜನರ ಸಹಕಾರವಿದ್ದಾಗ ಮಾತ್ರ ಊರು ಸಮೃದ್ಧ ವಾಗಿ ಬೆಳೆಯಲು ಸಾದ್ಯವಿದೆಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕುವೈಧ್ಯಾದೀಕಾರಿ ಡಾ ಎಂ.ಎಸ್.ಭಟ್ ಮಾರಿಗುಳಿ ಹೇಳಿದರು.
ಅವರು ತಾಲೂಕಿನ ಉಮ್ಮಚ್ಗಿಯ ಭ್ಯಾಗ್ಯಶ್ರೀ ಸೌಹಾರ್ದ ಸಹಕಾರಿಯು ಆರಂಭೀಸಿದ ಎ.ಟಿ.ಎಂ. ಘಟಕವನ್ನು ಉದ್ಘಾಟಿಸಿ,ನಂತರ ಸಹಕಾರಿಯು ಆತ್ಮೀಯವಾಗಿ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ
ನಾನು ಉಮ್ಮಚ್ಗಿ ಯಲ್ಲಿ ವೈಧ್ಯಕೀಯ ಸೇವೆ ಆರಂಭ ಮಾಡಿದಾಗ ಬಹಳ ಹಿಂದುಳಿದ ಹಳ್ಳಿಯಾಗಿತ್ತು.ರಸ್ತೆ ಸಂಪರ್ಕವಾಗಲಿ, ವಾಹನದ ಓಡಾಟವಾಗಲಿ ಇರಲಿಲ್ಲ.ಈಗ ಬಹಳ ಸುಧಾರಣೆ ಆಗಿದೆ . ಎಂದರಲ್ಲದೇ ನಮ್ಮ ಹತ್ತಿರದವರಿಗೆ ಸಹಾಯ ಮಾಡುವ ಪ್ರವೃತ್ತಿ ಬೆಳೆಯಬೇಕು.ನಮಗೆ ದೀನಸಿ ಕೊಡುವವರು, ಬಟ್ಟೆ ನೀಡುವವರು ಇಂಥಹ ಅವಶ್ಯಕ ವಸ್ತುಗಳನ್ನು ತಂದು ಪೂರೈಕೆ ಮಾಡುವವರು ಆರಾಮ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಿ ಆರೋಗ್ಯ ಪೂರ್ಣ ಸಮಾಜ ಕಟ್ಟಲು ಸಾಧ್ಯವೆಂದರು. ಕಳೆದ ೪೩ ವರುಷಗಳಿಂದ ಈ ಭಾಗದಲ್ಲಿ ವೈದ್ಯಕೀಯ ಸೇವೆ ಮಾಡುತ್ತಾ ಬಂದಿದ್ದೇನೆ. ಇಷ್ಟೋಂದು ಸುರ್ಧಿರ್ಘ ಸೇವೆ ನೀಡಲು ಈ ಪ್ರದೇಶದ ಜನರು ಇಟ್ಟಿರುವ ಪ್ರೀತಿ, ವಿಶ್ವಾಸವೇ ಕಾರಣವಾಗಿದೆ. ತಾವು ನೀಡಿದ ಸನ್ಮಾನ ಕ್ಕೆ ಕೃತಜ್ಞತೆ ಅರ್ಪೀಸಿದರು. ಉಮ್ಮಚ್ಗಿ ಭಾಗ್ಯಶ್ರಿ ಸೌಹಾರ್ದ ಸಹಕಾರಿಯೂ ಈಗ ಪ್ರೌಢ ವ್ಯವಸ್ಥೆಯಲ್ಲಿದ್ದು. ಇನ್ನಷ್ಟು ಸಾಧನೆ ಮಾಡಲು ಶಕ್ತಿ ಬರಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಗ್ರಾಂ.ಪಂ ಅಧ್ಯಕ್ಷೆ ರೂಪಾ ಪೂಜಾರಿ, ಕರ್ನಾಟಕ ಸೌಹಾರ್ದ ಸಹಕಾರಿಯ ನಿರ್ದೇಶಕಿ ಸರಸ್ವತಿ ಎನ್. ರವಿ ,ಹಾಗೂ ಯಲ್ಲಾಪುರದ ಚಾರ್ಟಡ್ ಅಕೌಂಟೆಂಟ್ ವಿಘ್ನೇಶ್ವರ ಗಾಂವ್ಕರ ಸಾಂದಭೀಕ ಮಾತುಗಳನ್ನ ಆಡಿದರು. ಭಾಗ್ಯಶ್ರಿ ಸೌಗಾರ್ದ ಸಹಕಾರಿ ಅಧ್ಯಕ್ಷ ರಾದ ಗಣೇಶ ಭಟ್ ಸಭಾದ್ಯಕ್ಷತೆ ವಹಿಸಿದ್ದರು.
ಸಹಕಾರಿಯ ಉಪಾಧ್ಯಕ್ಷ ಮಾಬ್ಲೇಶ್ವರ ಭಟ್ ಸ್ವಾಗತಿಸಿದರು. ನಿರ್ದೇಶಕ ವಿನಾಯಕ ಹೆಗಡೆ ಸನ್ಮಾನ ಪತ್ರ ವಾಚಿಸಿದರು. ವ್ಯವಸ್ಥಾಪಕ ಗುರುಪ್ರಸಾದ ಹೆಗಡೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
.
Leave a Comment