
ಯಲ್ಲಾಪುರ:ತಾಲೂಕಿನ ತಟವಾಳ ದಲ್ಲಿರುವ ರವಳನಾಥೇಶ್ವರ ದೇವಸ್ಥಾನದ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ನೂತನ ಸಭಾಭವನವನ್ನು ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಉದ್ಘಾಟಿಸಿ,ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಅತಿಥಿ ಗೃಹವನ್ನು ಉದ್ಘಾಟಿಸಿದರು.

ನಂತರ ಸಂಘಟನೆಯ ಪರವಾಗಿ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿ ಅವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಯಶವಂತ ಗುರುಗಳು,ಸಾಮಾಜೀಕ ಕಾರ್ಯಕರ್ತ ರವಿ ಕೈಟ್ಕರ್, ದೋಂಡು ಪಾಟೀಲ, ಸಂತೋಷ ಮರಾಠಿ,ರಾಯ್ ಕಸ್ತುರಿ,ಹಿರಿಯರು, ಭಕ್ತಾದಿಗಳು ಉಪಸ್ಥಿತರಿದ್ದರು.
Leave a Comment