
ಯಲ್ಲಾಪುರ: ಅರಣ್ಯವಾಸಿಗಳ ಸಮಸ್ಯೆ ನಿವಾರಣೆಗೆ ಸಾಂಘೀಕ ಹೋರಾಟ ಅನಿವಾರ್ಯ. ಕಾನೂನಾತ್ಮಕ ಹೋರಾಟದಿಂದಲೇ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಲಾಗುವದು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಯಲ್ಲಾಪುರ ತಾಲೂಕಿನ, ಕಿರವತ್ತಿ ಸಭಾಭವನದಲ್ಲಿ ಡಿ. ೨೨ ರ ‘ಬೆಳಗಾವಿ ಚಲೋ’ ಕಾರ್ಯಕ್ರಮಕ್ಕೆ ಸಂಬAಧಿಸಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಸ್ಫಂದನೆಗೆ ಸರಕಾರ ನಿರ್ಲಕ್ಷö್ಯ ಭಾವನೆ ತೋರಿಸುತ್ತಿದ್ದರುವದು ವಿಷಾದಕರ. ಚುನಾವಣೆ ಸಂದರ್ಭದಲ್ಲಿ ಮಾತ್ರ ಗಂಭಿರತೆ ಪಡೆದುಕೊಳ್ಳುವ ಅತಿಕ್ರಮಣ ಸಮಸ್ಯೆ ನಂತರದ ದಿನಗಳಲ್ಲಿ ವಿಧಾನ ಸಭಾ ಅಧಿವೇಶನದಲ್ಲಿ ಜನಪ್ರತಿನಿಧಿಗಳು ಮೌನವಾಗಿರುವದು ಖೇದಕರ ಎಂದು ಅವರು ಹೇಳಿದರು.
ಒಂದು ಕಣ್ಣಿಗೆ ಸುಣ್ಣ ಇನ್ನೋಂದು ಕಣ್ಣಿಗೆ ಬೆಣ್ಣೆ:
ಅರಣ್ಯ ಅಧಿಕಾರಿಗಳು ಶ್ರೀಮಂತರಿಗೊAದು ನೀತಿ, ಬಡವರಿಗೆ ಇನ್ನೋಂದು ನೀತಿ, ಅನುಸರಿಸಿ ಒಂದು ಕಣ್ಣಿಗೆ ಸುಣ್ಣ ಇನ್ನೋಂದು ಕಣ್ಣಿಗೆ ಬೆಣ್ಣ ಹಚ್ಚುವ ಧೋರಣೆ ಖಂಡನಾರ್ಹ ಎಂದು ರವೀಂದ್ರ ನಾಯ್ಕ ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕ ಅಧ್ಯಕ್ಷ ಭೀಮ್ಸಿ ವಾಲ್ಮೀಕಿ, ವಸಂತ ವಾಲ್ಮೀಕಿ, ನೂರ ಅಹಮ್ಮದ್, ಬೀರು ಸಳಕೆ, ರಾಮಣ್ಣ ಡಿ, ಲಾಲ್ ಬಿ ಹಜರತ್ ಸಾಬ ಮುಂತಾದವರು ಉಪಸ್ಥಿತರಿದ್ದರು.
Leave a Comment