ಯಲ್ಲಾಪುರ : ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಹಾಗೂ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ ಸಂಸ್ಥೆಯ ಆಶ್ರಯದಲ್ಲಿ ಕರ್ನಾಟಕ ರಾಜ್ಯ 56ನೇ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ಯಲ್ಲಾಪುರದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ಡಿ.27 ರಂದು ನಡೆಯಲಿದೆ ಎಂದು ಜಿಲ್ಲಾ ಅಥ್ಲೆಟಿಕ ಅಸೋಶಿಯೇಶನ್ ಕಾರ್ಯದರ್ಶಿ ಕೆ.ಆರ್ ನಾಯಕ ತಿಳಿಸಿದ್ದಾರೆ.
[
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವಶಿವರಾಂ ಹೆಬ್ಬಾರ್ ಈ ಚಾಂಪಿಯನ್‌ಶಿಪ್ ಗೆ ಹಸಿರು ನಿಶಾನೆ ತೋರಲಿದ್ದಾರೆ. ಎ.ಎಫ್.ಐ ಮಾನ್ಯತೆ ಪಡೆದ ಓಟದ ಸ್ಪರ್ಧೆಯಾಗಿರುತ್ತದೆ. ಈ ಚಾಂಪಿಯನ್‌ಶಿಪ್ ನಿಮಿತ್ತ ಯಲ್ಲಾಪುರದ ಬಾಲಕ, ಬಾಲಕಿಯರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ 14 ವರ್ಷದೊಳಗಿನ (27-12-2021 14 ವರ್ಷ ಮೀರಬಾರದು)
ಕ್ರೀಡಾಪಟುಗಳಿಗೆ 1.5 ಕಿ.ಮೀ. ಕ್ರಾಸ್ ಕಂಟ್ರಿ ರೇಸನ್ನುಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ಮೊದಲನೆಯ 10ಕ್ರೀಡಾ ವಿಜೇತರಿಗೆಬಹುಮಾನಗಳನ್ನು ವಿತರಿಸಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ದಿನಾಂಕದ ಮೂಲ ದಾಖಲೆ ಪ್ರತಿಯನ್ನು ಕಡ್ಡಾಯವಾಗಿ ತರತಕ್ಕದ್ದು, ಹೆಚ್ಚಿನಮಾಹಿತಿಯನ್ನು ನಿವೃತ್ತ ದೈಹಿಕ ಶಿಕ್ಷಕತಾಂಡೂರಾಯನ್,ಸಂಪರ್ಕಿಸಿ( ಮೊಬೈಲ್ ನಂಬರ್7676731136 ).ಪಡೆಯಬಹುದಾಗಿದೆ
Leave a Comment