
ಯಲ್ಲಾಪುರ :ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಇವರ ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ಅಯೋಜಿಸಿದ್ದ ೫೬ನೇ ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ೨೦೨೧ ಸಮಾರೋಪ ಸಮಾರಂಭದಲ್ಲಿವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಜೇತರಾದವರ ವಿವರ:
೧೬ ವರ್ಷ ವಯೋಮಾನದ
ಹುಡುಗಿಯರ ವಿಭಾಗದ ೨ ಕಿ.ಮೀ ಓಟದಲ್ಲಿ ಪ್ರಣತಿ ಬೆಂಗಳೂರು ಉತ್ತರ ಪ್ರಥಮ, ಪ್ರಿಯಾಂಕಾ ಧಾರವಾಡ ದ್ವಿತೀಯ, ಶರಣ್ಯಾ ಬೆಂಗಳೂರು ತೃತೀಯ,
೧೬ ವರ್ಷದ ಬಾಲಕರ ವಿಭಾಗದ ೨ ಕಿಮೀ ಓಟದಲ್ಲಿ ಚಿಂತನ ಎಚ್.ವಿ ಕೊಡಗು ಪ್ರಥಮ, ಭರತ್ ಎಚ್.ಗಿರಿಗೌಡ ಮೈಸೂರು ದ್ವಿತೀಯ, ವೇದವರುಣ ಎಸ್.ಮೈಸೂರು ತೃತೀಯ ಸ್ಥಾನ ಪಡೆದರು.
೧೮ ವರ್ಷದ ಬಾಲಕಿಯರ ೪ ಕಿಮೀ ಓಟದಲ್ಲಿ ಯುವರಾಣಿ ಬೆಂಗಳೂರು ಪ್ರಥಮ, ಸ್ಪಂದನ.ಪಿ.ಎಸ್ ದಕ್ಷಿಣಕನ್ನಡ ದ್ವಿತೀಯ, ರೂಪಶ್ರೀ ಎನ್.ಎಸ್ ದಕ್ಷಿಣ ಕನ್ನಡ ತೃತೀಯ, ೧೮ ವರ್ಷದ ಬಾಲಕರ ೬ ಕಿಮೀ ಓಟದಲ್ಲಿ ಶಿವಾಜಿ.ಪಿ.ಎಂ ಬೆಂಗಳೂರು ಪ್ರಥಮ, ಬಾಲು ಹೆಗ್ರಿ ಧಾರವಾಡ ದ್ವಿತೀಯ, ಲೋಕೇಶ ಕೆ.ಬೆಂಗಳೂರು ತೃತೀಯ ಸ್ಥಾನ ಪಡೆದಿದ್ದಾರೆ.
೨೦ ವರ್ಷದ ಬಾಲಕಿಯರ ವಿಭಾಗದ ೬ ಕಿಮೀ ಓಟದಲ್ಲಿ ರಶ್ಮಿ ಸಿ.ಎಂ ಬೆಂಗಳೂರು ಪ್ರಥಮ, ಪ್ರಿಯಾಂಕಾ ಬೆಂಗಳೂರು ದ್ವಿತೀಯ, ಚೈತ್ರಾ.ಪಿ ದಕ್ಷಿಣ ಕನ್ನಡ ತೃತೀಯ ಸ್ಥಾನ, ೨೦ ವರ್ಷದ ಬಾಲಕರ ವಿಭಾಗದ ೮ ಕಿಮೀ ಓಟದಲ್ಲಿ ಅರುಣ ಮಾಲವಿ ಬೆಂಗಳೂರು ಪ್ರಥಮ, ನರಸಿಂಗ ಪಾಟೀಲ್ ಬೆಂಗಳೂರು ದ್ವೀತೀಯ, ವೈಭವ ಪಾಟೀಲ್ ಬೆಂಗಳೂರು ತೃತೀಯ ಸ್ಥಾನ ಪಡೆದಿದ್ದಾರೆ.

ಹೆಣ್ಣುಮಕ್ಕಳ ೧೦ ಕಿಮೀ ಓಟದಲ್ಲಿ ಅರ್ಚನಾ.ಕೆ.ಎಂ. ಮೈಸೂರು ಪ್ರಥಮ, ಚೈತ್ರಾ ದೇವಾಡಿಗ ದಕ್ಷಿಣ ಕನ್ನಡ ದ್ವಿತೀಯ, ಸಾಹಿಲ್ ಎಸ್.ಡಿ ದಕ್ಷಿಣ ಕನ್ನಡ ತೃತೀಯ ಸ್ಥಾನ, ಬಾಲಕರ ವಿಭಾಗದ ೧೦ ಕಿಮೀ ಓಟದಲ್ಲಿ ಪರಸಪ್ಪ ದಕ್ಷಿಣ ಕನ್ನಡ ಪ್ರಥಮ, ರಾಘವೇಂದ್ರ.ಆರ್.ಸಿ ಕಾರವಾರ ದ್ವಿತೀಯ, ನಿತೀನಕುಮಾರ.ಎಂ ಕೊಡಗು ತೃತೀಯ ಸ್ಥಾನ ಪಡೆದಿದ್ದಾರೆ.
ತಾಲೂಕಿನವರಿಗೆ ಆಯೋಜಿಸಲಾಗಿದ್ದಾ U-೧೪ ವಯೋಮಿತಿಯ ಬಾಲಕ, ಬಾಲಕಿಯg ೧.೫ ಕಿ.ಮಿ. ದೂರದ ಕ್ರಾಸ್ ಕಂಟ್ರಿ ರೇಸ್ ನಲ್ಲಿ ಶ್ರೇಯಾ ಮಂಜುನಾಥ ಪ್ರಥಮ ಸ್ಥಾನ
ಶಿಲ್ಪಾ ಕುರಡೆಕರ್ ದ್ವೀತಿಯ ,ನಂದಿತಾ ನಾರಾಯಣ ಗೌಡ ತೃತೀಯ
ಬಾಲಕರ ವಿಭಾಗದಲ್ಲಿ ಮಹಮ್ಮದ್ ಆಯನ್ ಪ್ರಥಮ, ಕೊಂಡಿಬಾ ದ್ವೀತಿಯ,ರೋಹಿತ ತೃತೀಯ ಸ್ಥಾನ ಪಡೆದಿದ್ದಾರೆ.ಚಾಂಪಿಯನ್ ಶಿಪ್ನಲ್ಲಿ ವಿಜೇತರಾದ ಕ್ರೀಡಾಪಟುಗಳು ನಾಗಾಲ್ಯಾಂಡನ ಕೋಹಿಮಾದಲ್ಲಿ ಜನವರಿ ೧೫-೧೬ ರಂದು ನಡೆಯುವ ೫೬ನೇ ರಾಷ್ಟ್ರಮಟ್ಟದ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಲಿದ್ದಾರೆ. ಕ್ರಾಸ್ ಕಂಟ್ರಿ ಕ್ರೀಡಾಕೂಟದಲ್ಲಿ ,ಅಧಿಕ ಸಂಖ್ಯೆಯಲ್ಲಿ ೭೫೦ ಕ್ರೀಡಾಪಟುಗಳು ಭಾಗವಹಿಸಿದ್ದು ಇದೇ ಮೊದಲ ಬಾರಿಯಾಗಿದೆ.
. ಸ್ಥಳೀಯ ಉದಯೋನ್ಮುಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಯಲ್ಲಾಪುರ ತಾಲೂಕಿನವರಿಗೆ U-೧೪ ವಯೋಮಿತಿಯ ಬಾಲಕ, ಬಾಲಕಿಯರಿಗೂ ಸಹ ೧.೫ ಕಿ.ಮಿ. ದೂರದ ಕ್ರಾಸ್ ಕಂಟ್ರಿ ರೇಸ್ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪಂಚಾಯತ ರಾಜ ವಿಕೇಂದ್ರೀಕರಣ ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ , ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಯ ಕಾರ್ಯದರ್ಶಿ ರಾಜುವೆಲ್ ಎ. , , ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಉಪಾಧ್ಯಕ್ಷೆ ಶಾಮಿಲಿ ಪಾಟಣಕರ, ತಹಶೀಲ್ದಾರ ಶ್ರೀಕೃಷ್ಣ ಕಾಮಕರ, ಪ್ರಮುಖರಾದ ವಿಜಯ ಮಿರಾಶಿ, ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ಸದಾನಂದ ನಾಯ್ಕ, ಕಾರ್ಯದರ್ಶಿಗಳಾದ ಕೆ.ಆರ್ ನಾಯಕ ,ಅಂಕೋಲಾದ ಪ್ರಕಾಶ ಕುಂಜಿ, ಮುಂತಾದವರು ಇದ್ದರು
Leave a Comment