
ಯಲ್ಲಾಪುರ : ಗ್ರಾಮೀಣ ಭಾಗದಲ್ಲಿ ಮೊದಲಬಾರಿ ಕ್ರಾಸ್ ಕಂಟ್ರಿ ರಾಜ್ಯಮಟ್ಟದ ಕ್ರೀಡಾಕೂಟ ನಡೆದಿರುವದು ಖುಷಿಯಾಗಿದೆ. ಇಲ್ಲಿ ಕ್ರೀಡೆಯಲ್ಲಿ ಆಸಕ್ತಿಯಿರುವ ಮಕ್ಕಳು ತುಂಬಾ ಇದ್ದಾರೆ.ಅವರಿಗೆÀ ಸೂಕ್ತ ಮಾರ್ಗದರ್ಶನ ನೀಡುವವರು ಬೇಕು.ಈ ಮೂಲಕ ಉತ್ಸಾಹದಿಂದ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಪ್ರೋತ್ಸಾಹ ಸಿಗಬೇಕು ಎಂದು ಅಂತರಾಷ್ಟ್ರೀಯ ಅಥ್ಲೀಟ್ ಯಲ್ಲಾಪುರದ ಮಂಚಿಕೇರಿಯ ಕಮಲಾ ಬಾಬು ಸಿದ್ದಿ ಹೇಳಿದರು.

ಅವರು ಸೋಮವಾರ ಕರ್ನಾಟಕ ಅಥ್ಲೆಟಿಕ್ಸ್ ಸಂಸ್ಥೆ ಇವರ ಸಹಯೋಗದೊಂದಿಗೆ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆಯ ಆಶ್ರಯದಲ್ಲಿ ಪಟ್ಟಣದ ಕಾಳಮ್ಮನಗರ ತಾಲೂಕಾ ಕ್ರೀಡಾಂಗಣದಲ್ಲಿ ಅಯೋಜಿಸಿದ್ದ ೫೬ನೇ ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಚಾಂಪಿಯನ್ ಶಿಪ್ ೨೦೨೧ ಸಮಾರೋಪ ಸಮಾರಂಭದಲ್ಲಿ ತಮಗಿತ್ತ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಅಥ್ಲೀಟ್ಗಳನ್ನು ಸನ್ಮಾನಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಮಾತನಾಡಿ

ರಾಜ್ಯ ಮಟ್ಟದ ಕ್ರೀಡಾಕೂಟ ನಮ್ಮ ತಾÀಲೂಕಿನಲ್ಲಿಯೇ ನಡೆಯಲಿ ಎಂಬ ಸದುದ್ದೇಶದಿಂದ ನಮ್ಮಿಂದ ಸಂಪೂರ್ಣ ಸಹಕಾರ ನೀಡಿದ್ದು ಯಶಸ್ವಿಯಾಗಿದೆ. ಇಲ್ಲಿ ಆಯೋಜಿಸಲಾಗಿದ್ದ ಈ ಕ್ರಿಡಾಕೂಟದಿಂದ ದೈಹಿಕವಾಗಿ ಸಧೃಢರಾಗಿರುವ À ಸ್ಥಳೀಯ ಪ್ರತಿಭೆಗಳಿಗೆ ಸಹಕಾರಿಯಾಗಲಿದೆ.
ನಮ್ಮ ಜಿಲ್ಲೆಯ ಅಂತರಾಷ್ಟಿçÃಯ ಅಥ್ಲೆಟಿಕ್ಸ್ಗಳನ್ನು ಸನ್ಮಾನಿಸಿದ್ದು ಕ್ರೀಡಾಕೂಟದ ಯಶಸ್ಸು ಆಗಿದ್ದು, ಅವರ ಸಾದನೆ ಉದಯೋನ್ಮುಖ ಕ್ರೀಡಾಪಟುಗಳಿಗೆ ಪ್ರೇರಣೆಯಾಗಲಿ ಎಂದರು
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಅಥ್ಲೀಟ್ ಯಲ್ಲಾಪುರದ ಮಂಚಿಕೇರಿಯ ಕಮಲಾ ಬಾಬು ಸಿದ್ದಿ, ಕಿರಿಯ ರಾಷ್ಟ್ರ ಮಟ್ಟದ ಅಥ್ಲಿಟ್ ಹಳಿಯಾಳದ ಜೋಸ್ನಾ ಮಂಗಳವಾಡ್ಕರ ಹಾಗೂ ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಪ್ರಕಾಶ ರೇವಣಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
Leave a Comment