
ಯಲ್ಲಾಪುರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೩ ರ ಹುಬ್ಬಳ್ಳಿ ರಸ್ತೆಯ ಹಿಟ್ಟಿನಬೈಲ್ ಕ್ರಾಸ್ ಬಳಿ 3 ಕಾರುಗಳ ನಡುವೆ ಸರಣಿ ಅಪಘಾತವಾಗಿದ್ದು. ಕಾರಿನಲ್ಲಿದ್ದ ಪ್ರಯಾಣಿಕರಲ್ಲಿ ಒಬ್ಬರು ಸಾವನ್ನಪ್ಪಿದ್ದು,ಇನ್ನುಳಿದವರಿಗೆ ತೀವ್ರ ಪ್ರಮಾಣದ ಗಾಯಗಳಾಗಿರುವ ಘಟನೆ ನಡೆದಿದೆ.
ಹುಬ್ಬಳ್ಳಿ, ,ಬೆಂಗಳೂರು, ಹೈದ್ರಾಬಾದ್

ನೊಂದಣಿಯಿರುವ ೪ ಕಾರುಗಳು ಹೊಸ ವರ್ಷಾಚರಣೆಗೆಂದು ಪ್ರವಾಸಿ ತಾಣಗಳತ್ತ ತೆರಳುತ್ತದ್ದವು. ಓವರ್ ಟೇಕ್ ಮಾಡುವಾಗ ಅವುಗಳ ನಡುವೆ ಸರಣಿ ಅಪಘಾತಕ್ಕೀಡಾಗಿದೆ. 3 ಕಾರುಗಳಲ್ಲಿ ೧೪ ಜನ ಪ್ರಯಾಣಿಸುತ್ತಿದ್ದರು. ಅವರಲ್ಲಿ ಒಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದು ,ಗಂಭೀರ ಗಾಯಗಳಾಗಿದ್ದ ೮ ಜನರಿಗೆ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹುಬ್ಬಳ್ಳಿಗೆ ಕಳಿಸಲಾಗಿದೆ.

೫ ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.
Leave a Comment