ಯಲ್ಲಾಪುರ:ಸಂಗೀತ ಕಲೆಯ ಕಲಿಕೆಗೆ ನಿರಂತರವಾದ ಪರಿಶ್ರಮ ಅಗತ್ಯ. ನಾದವನ್ನು ಆರಾಧಿಸಿ ಅನುಭವಿಸಿಕೊಂಡು ಒಲಿಸಿಕೊಳ್ಳುವ ತಪಸ್ಸಾಗಬೇಕು. ಸೂಕ್ಷ್ಮವಾದ ಸಂಗತಿಗಳನ್ನು ಸಂಗೀತದ ಆಳಕ್ಕೆ ಇಳಿದು ಅರಿತಾಗ ಆಗುವ ಆನಂದ ಅನನ್ಯವಾದದ್ದು. ಒತ್ತಡಗಳನ್ನು ನಿವಾರಿಸಿಕೊಂಡು ಬದುಕಿನಲ್ಲಿ ಲವಲವಿಕೆಯಿಂದ ಇರಲು ಉತ್ತಮ ಸಂಗೀತವನ್ನು ಕೇಳುವ ಅಭಿರುಚಿ ನಮ್ಮದಾಗಬೇಕು. ಎಂದು ಬೆಂಗಳೂರಿನ ಹೈಕೋರ್ಟಿನ ನ್ಯಾಯವಾದಿ ಗಣಪತಿ ಭಟ್ಟ ಹೇಳಿದರು.
ಅವರು ವಜ್ರಳ್ಳಿಯ ರೈತ ಸಭಾಭವನದಲ್ಲಿ ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ಸೇವಾ ಬಳಗ ದ ಸಹಯೋಗದಲ್ಲಿ ವಸಂತ ಕನಕಾಪುರರವರ ಸ್ಮರಣಾರ್ಥ ನಾದಶ್ರೀ ಸಂಗೀತ ಬಳಗದವರು ಪ್ರಸ್ತುತಪಡಿಸಿದ ಏಳನೇ ವರ್ಷದ ನಾದ ವಸಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ದ ಅಧ್ಯಕ್ಷತೆವಹಿಸಿದ್ದ ಸಾಹಿತಿ, ಸಂಪಾದಕ ವನರಾಗ ಶರ್ಮಾ ಮಾತನಾಡಿ ಪ್ರತಿಭೆಗಳಿಗೆ ತಕ್ಕ ವೇದಿಕೆಗಳು ಸಿಕ್ಕರೆ ಅವರ ಕಲೆಯನ್ನು ಗೌರವಿ ಸಿಗದಂತಾಗುತ್ತದೆ. ಸಂಸ್ಕೃತಿ ಇರುವಲ್ಲಿ ನೆಮ್ಮದಿ ಇದೆ. ಮಾನವೀಯತೆಯ ಗುಣ ದೂರವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಕಲೆಯನ್ನು ಆರಾಧಿಸುವ ಕೆಲಸವಾಗಬೇಕಿದೆ. ಸಮಾಜದ ಮುಖ್ಯ ಧ್ಯೇಯ ಸಂಸ್ಕೃತಿ ಯಲ್ಲಿ ಅಡಗಿದೆ. ಎಂದರು.
ಅತಿಥಿಗಳಾಗಿ ನಾಗೇಂದ್ರ ಹೆಗಡೆ ಕೋಣೆಮನೆ, ಜೆ.ಸಿ.ಭಟ್ಟ, ವಿ.ಎನ್.ಭಟ್ಟ. ಜಿ.ವಿ.ಭಟ್ಟ, ಸುಬ್ರಹ್ಮಣ್ಯ ಗಾಂವ್ಕಾರ, ಆರ್ ಎನ್ ಕೋಮಾರ, ನವೀನ ಕಿರಗಾರೆ. ಉಪಸ್ಥಿತರಿದ್ದರು. ಆರಂಭದಲ್ಲಿ ನಾದಶ್ರೀ ಸಂಗೀತ ಬಳಗದವರಿಂದ ಪ್ರಾರ್ಥನೆ ಮತ್ತು ನಾಡಗೀತೆ ಗಾಯನ ಕಾರ್ಯಕ್ರಮ ಜರುಗಿತು. ದತ್ತಾತ್ರೇಯ ಭಟ್ಟ ಸ್ವಾಗತಿಸಿದರು. ಸಂಗೀತ ಕಾರ್ಯಕ್ರಮ ಸಂಘಟಕ ವಸಂತ ಕಲಾ ಪ್ರತಿಷ್ಠಾನದ ಉಮೇಶ ಗೌಡ ಬೀಗಾರ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ಸಂಗೀತಾ ಗಾಂವ್ಕಾರ ನಿರ್ವಹಿಸಿದರು. ಜಿ ಎನ್ ಕೋಮಾರ ವಂದಿಸಿದರು. ನಂತರ ನಡೆದ ನಾದ ವಸಂತ ಸಂಗೀತ ಕಾರ್ಯಕ್ರಮದಲ್ಲಿ ಮಹೇಶ ಮಹಾಲೆಯವರ ಹಿಂದೂಸ್ಥಾನಿ ಗಾಯನ ಮತ್ತು ಲಘು ಸಂಗೀತ ಸಂಗೀತಾಸಕ್ತರನ್ನು ಮನಸೂರೆಗೊಳಿಸಿತು. ಸಹಗಾಯಕರಾಗಿ ಗೀತಾಪಾಟೀಲ,ತಬಲಾದಲ್ಲಿ ಮಧು ಕುಡಾಳಕರ್, ಗಂಗಾಧರ ಪಾಟೀಲ, ಹಾರ್ಮೋನಿಯಂ ನಲ್ಲಿ ಉಮೇಶ ಗೌಡ ಬೀಗಾರ ಸಹಕರಿಸಿದರು.
Leave a Comment