ಹೊನ್ನವಾರ : ಸ್ನಾನದ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾನೆಂದು ಅರೋಪಿಸಿ ವ್ಯಕ್ತಿಯೋರ್ವನ ವಿರುದ್ಧ ಆತನ ಸೋದರ ಅತ್ತೆ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಟ್ಟಣದ ತುಳಸಿನಗರ ವಿಶಲ್ ಮೇಸ್ತ ಎನ್ನುವವರು ಕಳೆದ ಐದು ತಿಂಗಳಿAದ ಮಹಿಳೆಯ ಮೊಬೈಲ್ ನಂಬರಿಗೆ ಕರೆ ಮಾಡಿ, ಬೆತ್ತಲೆ ಸ್ನಾನ ಮಾಡುವ ಒಂದು ವಿಡಿಯೋ ತನ್ನ ಬಳಿ ಇದೆ. ತನಗೆ ಹಣ ಕೊಡಬೇಕು ಮತ್ತು ಬೆತ್ತಲೆ ಸ್ನಾನ ಮಾಡುವ ಇನ್ನೂ ಎರಡು ವಿಡಿಯೋವನ್ನು ಮಾಡಿ ತನಗೆ ಕಳುಹಿಸಬೇಕು. ಇಲ್ಲಸಿದ್ದಲ್ಲಿ ಎಲ್ಲರಿಗೂ ವಿಡಿಯೋವನ್ನು ಕಳುಹಿಸಿ ಮಾನ ಕಳೆಯುತ್ತೇನೆ. ಎಂದು ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.
ತಾನು ಹೇಳಿದಂತೆ ಕೇಳು ಇಲ್ಲವಾದರೆ ತನ್ನ ಹತ್ತಿರ ಇರುವ ಸ್ನಾನದ ಬೆತ್ತಲೆ ವಿಡಿಯೋವನ್ನು ಎಲ್ಲರಿಗೂ ಕಳುಹಿಸಿ ನಿನ್ನ ಮಾನ ತೆಗೆಯುತ್ತೇನೆ. ಈ ವಿಷಯವನ್ನು ಬೇರೆ ಯಾರಿಗಾದರೂ ಹೇಳಿದರೆ. ಬದುಕಲು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಕೂಡ ಒಡ್ಡಿದ್ದ ಎಂದು ಸೋದರ ಅತ್ತೆ ದೂರಿನಲ್ಲಿ ತಿಳಿಸಿದ್ದಳು.
ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ವಿಶಾಲ್ ಮೇಸ್ತನನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಜಿಲ್ಲಾ ಕಾರಾಗ್ರಹಕ್ಕೆ ಕರೆದೊಯ್ದಿದ್ದಾರೆ.
Leave a Comment