ಯಲ್ಲಾಪುರ : ತಾಲೂಕಿನಲ್ಲಿ ಹೊಸ ವರ್ಷಚಾರಣೆ ಗೆ ನಿಯಮ ಹೇರಿ ನೈಟ್ ಕರ್ಪೂಯು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಪಟ್ಟಣದಾದ್ಯಂತ ಪೊಲೀಸ್ ವಾಹನದಲ್ಲಿ ಧ್ವನಿವರ್ಧಕ ಬಳಸಿ ಹೋಟೆಲ್, ಅಂಗಡಿ-ಮುಗ್ಗಟ್ಟು ಹಾಗೂ ಇನ್ನಿತರೆ ವ್ಯವಹಾರಗಳನ್ನು ನಡೆಸುವವರಿಗೆ ನೈಟ್ ಕರ್ಮ್ಯೂ ಕುರಿತು ಎಚ್ಚರಿಕೆ ಸಂದೇಶ ಸಾರಿದರು.
ರಾತ್ರಿ 8ಗಂಟೆಯಿಂದಲೇ ನೈಟ್ ಕರ್ಮ್ಯೂ ಜಾರಿಯಾಗಿದ್ದರಿಂದ ಕೆಲವು ಹೋಟೆಲ್ ಹಾಗೂ ಅಂಗಡಿಗಳು, ಸಂಚರಿಸುತ್ತಿದ್ದ ದ್ವಿಚಕ್ರ ವಾಹನ ಸವಾರರು, ಇನ್ನಿತರ ಪಾದಚಾರಿಗಳಿಗೆ ಪೊಲೀಸರು ಅಲ್ಲಲ್ಲಿ ನಿಂತು ವಿನಾಕಾರಣ ಸಂಚರಿಸುವಂತಿಲ್ಲ, ಅಂಗಡಿ ಮುಗ್ಗಟುಗಳನ್ನು ತೆರೆದಿಡುವಂತಿಲ್ಲ ಎಂದು ತಿಳುವಳಿಕೆ ಹೇಳಿ, ಆದೇಶ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡುತ್ತಿರುವದು ಕಂಡು ಬಂತು. ಸದಾ ಗಿಜಿಗೂಡುತ್ತಿದ್ದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ ರಾತ್ರಿ 8ಗಂಟೆಯ ನಂತರ ರಸ್ತೆ ಬಿಕೋ ಎನ್ನುತ್ತಿದ್ದವು.
Leave a Comment