
ಯಲ್ಲಾಪುರ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಪಟ್ಟಣದ ಶಾರದಾಗಲ್ಲಿಯಲ್ಲಿ ಕಾರ್ಮಿಕ ಇಲಾಖೆಯ ಸುಸಜ್ಜಿತ ನೂತನ ತಾಲೂಕಾ ಕಾರ್ಮಿಕ ಕಛೇರಿ ( ಕಾರ್ಮಿಕ ಭವನ ) ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಯನ್ನು ನೆರವೇರಿಸಿದರು.
ಈ ನೂತನ ಕಾರ್ಮಿಕ ಕಛೇರಿಯು 2.60 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು 3 ಮಹಡಿಯನ್ನು ಹೊಂದಿರಲಿದೆ ಮೊದಲನೇ ಮಹಡಿಯಲ್ಲಿ ಕಾರ್ಮಿಕ ಕಲ್ಯಾಣ ಅಧಿಕಾರಿ ಕಚೇರಿ ಎರಡನೇ ಮಹಡಿಯಲ್ಲಿ ಲೇಬರ್ ಇನ್ಸಪೆಕ್ಟರ್ ಕಾರ್ಯಾಲಯ ಮತ್ತು ಮೂರನೇ ಮಹಡಿಯಲ್ಲಿ ಸಭಾಂಗಣವು ನಿರ್ಮಾಣವಾಗಲಿದೆ.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ್, ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ್, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಮಿತ ಅಂಗಡಿ, ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಎನ್ ಗಾಂವ್ಕರ್ ಪ್ರಮುಖರಾದ ವಿಜಯ ಮಿರಾಶಿ , ಬಾಲಕೃಷ್ಣ ನಾಯಕ, ಮುರಳಿ ಹೆಗಡೆ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment