
ಯಲ್ಲಾಪುರ: ಹೊಸ ವರ್ಷದಲ್ಲಿ ನಮ್ಮ ಜೀವನವನ್ನು ಹೊಸತನಕ್ಕೆ ಒಡ್ಡಿಕೊಂಡರೆ ಆತ್ಮ ಸಂತೃಪ್ತಿ ಚೆನ್ನಾಗಿರುತ್ತದೆ. ಈ ದಿಶೆಯಲ್ಲಿ ಈಶ್ವರಿ ವಿದ್ಯಾಲಯದಂತಹ ಅಧ್ಯಾತ್ಮ ಕೇಂದ್ರಗಳಲ್ಲಿ ನಮ್ಮ ಮನಸ್ಸನ್ನು ಪರಮಾತ್ಮನೆಡೆಗೆ ಯಾವ ರೀತಿ ಜೋಡಿಸಬೇಕು ಎಂಬುದನ್ನು ತಿಳಿಸಿಕೊಡುವ ಮೂಲಕ ಪ್ರತಿಯೊಬ್ಬರ ಧರ್ಮ ಮಾರ್ಗದಲ್ಲಿ ಮುನ್ನಡೆಯಲು ಪ್ರೇರೆಪಿಸುತ್ತದೆ. ಎಂದು ಬ್ರಹ್ಮಕುಮಾರಿ ಶಿವಲೀಲಕ್ಕ ಹೇಳಿದರು. ಅವರು ಪಟ್ಟಣದ ಶಾರದಾಗಲ್ಲಿಯ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ೨೦೨೨ ಸ್ವಾಗತ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ
ಬದುಕಿನಲ್ಲಿ ಕರ್ಮ ಮತ್ತು ಧರ್ಮೆವೆರಡು ಸಮಾನಸ್ಥಾನ ಪಡೆದಿದ್ದರೂ ಕೂಡಾ ಇಂದು ಕರ್ಮಕ್ಕೆ ಪ್ರಾಧಾನ್ಯತೆ ನೀಡಿ ಪುರುಸೊತ್ತಿಲ್ಲವೆಂದು ಧರ್ಮವನ್ನು ಕಡಗಣಿಸದೇ ಏಕಚಿತ್ತದಿಂದ ದೇವರ ಧ್ಯಾನ ಮಾಡಬೇಕು .ಎಲ್ಲಿ ಶುದ್ಧ ಸಂಕಲ್ಪವಿರುತ್ತದೆಯೋ ಅಲ್ಲಿ ಒತ್ತಡವಿರುವದಿಲ್ಲ ಎಂದರು.
ಪತ್ರಕರ್ತರು ಹಾಗೂ ಪೋಟೋ ಗ್ರಾಫರ್ ಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ದಿನದರ್ಶಿಕೆ ಸಿಹಿ ನೀಡಿ ವೃಕ್ಷಕ್ಕೆ ನೀರೆರದು ೨೦೨೨ ನ್ನು ಸ್ವಾಗತಿಸಿದರು .ಬ್ರಹ್ಮಕುಮಾರಿ ವಾಣಿಶ್ರೀ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು
Leave a Comment